ADVERTISEMENT

ಕಾಂಗ್ರೆಸ್‌ನದ್ದೇ ಪರ್ಸೆಂಟೇಜ್ ಸರ್ಕಾರ, ಸಿದ್ದರಾಮಯ್ಯ ಅದರಲ್ಲಿ ಕಿಂಗ್: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 6:32 IST
Last Updated 20 ನವೆಂಬರ್ 2021, 6:32 IST
ಸಿದ್ದರಾಮಯ್ಯ ಹಾಗೂ ಕೆ.ಎಸ್. ಈಶ್ವರಪ್ಪ
ಸಿದ್ದರಾಮಯ್ಯ ಹಾಗೂ ಕೆ.ಎಸ್. ಈಶ್ವರಪ್ಪ   

ಮೈಸೂರು: 'ಕಾಂಗ್ರೆಸ್‌ನದ್ದೇ ಪರ್ಸೆಂಟೇಜ್ ಸರ್ಕಾರ. ಸಿದ್ದರಾಮಯ್ಯ ಪರ್ಸೆಂಟೇಜ್ ಕಿಂಗ್. ಅವರೇನು ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವುದು?' ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪರ್ಸೆಂಟೇಜ್ ಆರೋಪ ಸಂಬಂಧ ಗುತ್ತಿಗೆದಾರರ ಸಂಘದವರು ದಾಖಲೆ ನೀಡಿದರೆ ತನಿಖೆ ನಡೆಸಲಾಗುವುದು' ಎಂದರು.

ಮಳೆಯಿಂದ ಭಾರಿ ಅನಾಹುತ ಆಗಿದ್ದರೂ ಬಿಜೆಪಿಯವರು ಸಮಾವೇಶ ನಡೆಸಿ ಶಂಖ ಊದುತ್ತಿದ್ದಾರೆಂಬ ಎಚ್. ಡಿ. ಕುಮಾರಸ್ವಾಮಿ ಟೀಕೆಗೆ, 'ಜೆಡಿಎಸ್‌ನಲ್ಲಿ ಶಂಖ ಊದುವುದಕ್ಕೂ ಯಾರೂ ಇಲ್ಲದಂತಾಗಿದೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ನವರು ಎಷ್ಟು ಮಂದಿ ಅಭ್ಯರ್ಥಿಗಳನ್ನು ಹಾಕುತ್ತಾರೆ ನೋಡೋಣ' ಎಂದರು.

ADVERTISEMENT

'ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ 15ರಿಂದ 16ಸ್ಥಾನ ಗೆಲ್ಲಲಿದ್ದೇವೆ. ಈ ಮೂಲಕ ವಿಧಾನ ಪರಿಷತ್ ನಲ್ಲೂ ಬಿಜೆಪಿ ಬಹುಮತ ಹೊಂದಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.