ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರಿನಿಂದ ಚಿದಂಬರಂ ಮತ್ತು ಎರ್ನಾಕುಲಂಗೆ ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಆರಂಭಿಸಿದೆ.
ಬೆಂಗಳೂರನಿಂದ ರಾತ್ರಿ 10ಕ್ಕೆ ಹೊರಡುವ ಕರೋನ ಎ.ಸಿ ಸ್ಲೀಪರ್ ಬಸ್, ಹೊಸೂರು, ತಿರುವಣ್ಣಾಮಲೈ, ನೈವೆಲಿ ಮಾರ್ಗವಾಗಿ ಬೆಳಿಗ್ಗೆ 6ಕ್ಕೆ ಚಿದಂಬರಂ ತಲುಪಲಿದೆ. ಅಲ್ಲಿಂದ ರಾತ್ರಿ 9.30ಕ್ಕೆ ಹೊರಟು ಬೆಳಿಗ್ಗೆ 5.45ಕ್ಕೆ ಬೆಂಗಳೂರು ತಲುಪಲಿದೆ. ₹900 ದರ ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ಎರ್ನಾಕುಲಂಗೆ ರಾತ್ರಿ 9.30 ಹೊರಡುವ ಅಂಬಾರಿ ಡ್ರೀಮ್ ಕ್ಲಾಸ್( ಮಲ್ಟಿ ಆಕ್ಸಲ್ ಎ.ಸಿ ಸ್ಲೀಪರ್) ಬಸ್, ಬೆಳಿಗ್ಗೆ 7.30ಕ್ಕೆ ಎರ್ನಾಕುಲಂ ತಲುಪಲಿದೆ. ಅಲ್ಲಿಂದ ರಾತ್ರಿ 9ಕ್ಕೆ ಹೊರಟು, ಬೆಳಿಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣದರ ₹1,400 ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.