ಬೆಂಗಳೂರು: ಹವಾ ನಿಯಂತ್ರಿತ(ಎ.ಸಿ) ಬಸ್‌ಗಳ ಕಾರ್ಯಾಚರಣೆಯನ್ನು ಗುರುವಾರದಿಂದ (ಜೂ.25) ಆರಂಭಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.
ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎ.ಸಿ ಬಸ್‌ಗಳು ಸಂಚರಿಸಲಿವೆ.
‘ಬಸ್‌ಗಳಲ್ಲಿನ ತಾಪಮಾನ 24ರಿಂದ 25 ಸೆಲ್ಸಿಯಸ್ ಇರುವಂತೆ ನಿರ್ವಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾತ್ರಿ ಪ್ರಯಾಣದಲ್ಲಿ ಹೊದಿಕೆ ನೀಡದಿರಲು ನಿರ್ಧರಿಸಲಾಗಿದೆ’ ಎಂದುಕೆಎಸ್ಆರ್‌ಟಿಸಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.