ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ 'ಸೇವಾ ಸಿಂಧು' ಪೋರ್ಟಲ್‍ನಿಂದ ಆನ್‍ಲೈನ್ ಮೂಲಕ ಬಸ್‍ಪಾಸ್ಗೆ ಅರ್ಜಿಸಲ್ಲಿಸುವ ವ್ಯವಸ್ಥೆ ಕಲ್ಪಿಸಿದೆ.
ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಸಲ್ಲಿಸುವ ಅರ್ಜಿಗೆ ಶಾಲಾ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿಕೊಂಡು, ಈ ಹಿಂದಿನಂತೆಯೇ ಬಸ್ ನಿಲ್ದಾಣದ ಪಾಸ್ ಕೌಂಟರ್ ನಲ್ಲಿ ಹಣ ಪಾವತಿಸಿ, ಪಾಸ್ ಪಡೆಯಬಹುದು.ಅಥವಾ ತಾವು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಗಳಲ್ಲೇ ಶುಲ್ಕ ಪಾವತಿಸಿ, ಶಾಲಾ-ಕಾಲೇಜುಗಳ ಮುಖಾಂತರ ಬಸ್‍ಪಾಸ್ ಪಡೆದುಕೊಳ್ಳಬಹುದು. ಸೇವಾಸಿಂಧು ಮೂಲಕ ಆನ್‍ಲೈನ್ಶುಲ್ಕ ಪಾವತಿ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಮ್ಯಾನ್ಯುಯಲ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಉಚಿತವಾಗಿದ್ದು, ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಶುಲ್ಕ ಮಾತ್ರ ಪಡೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಬಸ್‍ಪಾಸ್ ದರ ವಿವರ(ಶುಲ್ಕಸಹಿತ)
ಪಾಸ್ ವಿಧ;ಸಾಮಾನ್ಯ;ಎಸ್‍ಸಿ,ಎಸ್‍ಟಿ
ಪ್ರಾಥಮಿಕ ಶಾಲೆ;150;150
ಪ್ರೌಢಶಾಲೆ ಬಾಲಕರು;750;150
ಪ್ರೌಢಶಾಲೆ ಬಾಲಕಿಯರು;550;150
ಪಿಯುಸಿ, ಪದವಿ, ಡಿಪ್ಲೊಮ;1,050;150
ಐಟಿಐ;1,310;160
ವೃತ್ತಿಪರ ಕೋರ್ಸ್‍ಗಳು;1,550;150
ಸಂಜೆ ಕಾಲೇಜು, ಪಿಎಚ್.ಡಿ;1,350;150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.