ADVERTISEMENT

ಭಾರತ ಪ್ರವಾಸದ ಭಾಗ: ಕೆಎಸ್‌ಆರ್‌ಟಿಸಿಗೆ ಜರ್ಮನ್‌ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 18:33 IST
Last Updated 3 ಡಿಸೆಂಬರ್ 2025, 18:33 IST
ಜರ್ಮನ್‌ ನಿಯೋಗವು ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿ ಮಾಹಿತಿ ಪಡೆಯಿತು
ಜರ್ಮನ್‌ ನಿಯೋಗವು ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿ ಮಾಹಿತಿ ಪಡೆಯಿತು   

ಬೆಂಗಳೂರು: ಜರ್ಮನಿ ಸರ್ಕಾರದ ಫೆಡರಲ್ ಸಚಿವಾಲಯ ಎಕನಾಮಿಕ್ ಕೋ ಆಪರೇಶನ್ ಆ್ಯಂಡ್‌ ಡೆವಲಪ್‌ಮೆಂಟ್‌ನ (ಬಿಎಂಝಡ್‌) ಉನ್ನತ ಮಟ್ಟದ ನಿಯೋಗವು ಭಾರತದ ಪ್ರವಾಸದ ಭಾಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭೇಟಿ ನೀಡಿತು.

ದೃಷ್ಟಿ ದೋಷ ಹೊಂದಿದ ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾದ ‘ಧ್ವನಿ ಸ್ಪಂದನ – ಆನ್‌ಬೋರ್ಡ್’ ಬಗ್ಗೆ ಮಾಹಿತಿ ಪಡೆದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಮಾಹಿತಿ ನೀಡಿದರು. 

ನಿಯೋಗದಲ್ಲಿ ಬಿಎಂಝಡ್‌ ಮಹಾ ನಿರ್ದೇಶಕಿ ಕ್ರಿಸ್ಟೀನ್ ಟೋಟ್‌ಝ್ಕೆ, ಬಾರ್ಬರಾ ಶಾಫರ್, ಕ್ರಿಸ್ಟೋಫ್ ವಾನ್ ಸ್ಟೆಕೋವ್, ದೆಹಲಿಯಲ್ಲಿರುವ ಜರ್ಮನ್‌ ರಾಯಭಾರ ಕಚೇರಿಯ ಗೊಟ್‌ಫ್ರೈಡ್ ವಾನ್ ಗೆಮಿಂಗನ್, ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಶೀನಂ ಪುರಿ, ಜಾಸ್ಮಿನ್ ಕೌರ್, ಜಿಐಝಡ್ ನಿರ್ದೇಶಕಿ ಜುಲಿ ರೆವಿಯರ್ ಉಪಸ್ಥಿತರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.