ADVERTISEMENT

ಕೆಎಸ್‌ಆರ್‌ಟಿಸಿಯಿಂದ ತಿರುಪತಿಗೆ ಪ್ಯಾಕೇಜ್ ಪ್ರವಾಸ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 19:45 IST
Last Updated 13 ಜುಲೈ 2021, 19:45 IST
ತಿರುಪತಿ ವೆಂಕಟೇಶ್ವರ ದೇವಸ್ಥಾನ
ತಿರುಪತಿ ವೆಂಕಟೇಶ್ವರ ದೇವಸ್ಥಾನ   

ಬೆಂಗಳೂರು: ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಕೆಎಸ್‌ಆರ್‌ಟಿಸಿ ಶುಕ್ರವಾರದಿಂದ (ಜು.16)ಮತ್ತೆ ಆರಂಭಿಸಲಿದೆ.

ಐರಾವತ ಕ್ಲಬ್ ಕ್ಲಾಸ್(ಮಲ್ಟಿ ಆಕ್ಸೆಲ್) ಬಸ್‌ನಲ್ಲಿ ಪ್ರವಾಸ ಕರೆದೊಯ್ಯಲಾಗುತ್ತದೆ. ಪ್ರತಿದಿನ ರಾತ್ರಿ 8.45ಕ್ಕೆ ಶಾಂತಿನಗರ ನಿಲ್ದಾಣದಿಂದ ಬಸ್ ಹೊರಡಲಿದೆ. ಜಯನಗರ, ನಾಗಸಂದ್ರ, ಎನ್.ಆರ್.ಕಾಲೊನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತಹಳ್ಳಿ, ಐಟಿಐ ಗೇಟ್ ಮತ್ತು ಕೆ.ಆರ್‌.ಪುರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊಸಕೋಟೆ ಮಾರ್ಗದಲ್ಲಿ ಪ್ರಯಾಣ ಮುಂದುವರಿಸಲಾಗುವುದು.

ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ ರಾತ್ರಿ 8.30ಕ್ಕೆ ಹೊರಡುವ ಮತ್ತೊಂದು ಬಸ್, ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣ, ಐಟಿಐ ಗೇಟ್, ಕೆ.ಆರ್.ಪುರ ಮಾರ್ಗದಲ್ಲಿ ತಿರುಪತಿಗೆ ಪ್ರಯಾಣ ಮುಂದುವರಿಯಲಿದೆ.

ADVERTISEMENT

ಭಾನುವಾರದಿಂದ ಗುರುವಾರದ ತನಕ ವಯಸ್ಕರಿಗೆ ಪ್ರಯಾಣದರ ₹2,200 ಮತ್ತು ಮಕ್ಕಳಿಗೆ (6ರಿಂದ 12 ವರ್ಷ) ₹1,800 ದರ ನಿಗದಿ ಮಾಡಲಾಗಿದೆ. ವಾರಾಂತ್ಯದ ದಿನ (ಶುಕ್ರವಾರ ಮತ್ತು ಶನಿವಾರ) ವಯಸ್ಕರಿಗೆ ₹2,600 ಮತ್ತು ಮಕ್ಕಳಿಗೆ ₹2,000 ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.