ADVERTISEMENT

ಪಾಸ್ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:36 IST
Last Updated 14 ಸೆಪ್ಟೆಂಬರ್ 2021, 17:36 IST

ಬೆಂಗಳೂರು: ವಿದ್ಯಾರ್ಥಿ ಬಸ್ ಪಾಸ್‌ ವಿತರಣೆ ಅವಧಿ ವಿಸ್ತರಿಸಿರುವ ಕೆಎಸ್‌ಆರ್‌ಟಿಸಿ, ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸಲು 2020–21ನೇ ಸಾಲಿನ ಪಾಸ್ ಅವಧಿಯನ್ನು ಸೆ.25ರವರೆಗೆ ವಿಸ್ತರಿಸಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಬೇಕಿದೆ. ಅಲ್ಲಿಯ ತನಕ ಹಿಂದಿನ ವರ್ಷದ ಪಾಸ್ ಬಳಸಿ ಪ್ರಯಾಣಿಸಬಹುದು. ಪಾಸ್ ಪಡೆಯದಿರುವ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಂದ ನೀಡಿರುವ ಗುರುತಿನ ಚೀಟಿ ಮತ್ತು ಶುಲ್ಕ ಪಾವತಿಸಿರುವ ರಸೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT