ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ್ ವೋಲ್ವೊ ಬಸ್ ಆರಂಭಿಸಿದೆ.
ಶನಿವಾರ ಈ ಮಾರ್ಗದ ಬಸ್ ಸಂಚಾರ ಆರಂಭವಾಗಿದ್ದು, ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ವೊಲ್ವೊ ಬಸ್ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 2.20ಕ್ಕೆ ಹೊರಟು ಸಂಜೆ 5.10ಕ್ಕೆ ಮೈಸೂರು ತಲುಪಲಿದೆ. ಮರುದಿನ ಬೆಳಿಗ್ಗೆ 6.45ಕ್ಕೆ ನಿಲಕ್ಕಲ್ ಬಸ್ ನಿಲ್ದಾಣವನ್ನು ತಲುಪಲಿದೆ. ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶ ನೀಡಲಾಗಿದೆ. ವಾಪಸ್ ಬರುವಾಗ ನಿಲಕ್ಕಲ್ ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪ್ರತಿದಿನ ಸಂಜೆ 6ಕ್ಕೆ ನಿಲಕ್ಕಲ್‌ನಿಂದ ವೋಲ್ವೊ ಬಸ್ ಹೊರಡಲಿದ್ದು, ಮರುದಿನ ಬೆಳಿಗ್ಗೆ 10ಕ್ಕೆ ಮೆಜೆಸ್ಟಿಕ್ ತಲುಪಲಿದೆ.
ಟಿಕೆಟ್ ದರ ₹ 1,750 ನಿಗದಿಪಡಿಸಲಾಗಿದೆ. ನೆರೆಯ ರಾಜ್ಯಗಳಲ್ಲಿನ ಖಾಸಗಿ ಬುಕಿಂಗ್ ಕೌಂಟರ್‌ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕಿಂಗ್ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ವೆಬ್‌ಸೈಟ್: www.ksrtc.in ಮೂಲಕವೂ ಕಾಯ್ದಿರಿಸಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.