ADVERTISEMENT

ಕುಂದಗೋಳ ಉಪ ಚುನಾವಣೆ: ಅಂಚಟಗೇರಿಯಲ್ಲಿ ಉತ್ಸಾಹದ ಮತದಾನ

​ಪ್ರಜಾವಾಣಿ ವಾರ್ತೆ
Published 19 ಮೇ 2019, 5:26 IST
Last Updated 19 ಮೇ 2019, 5:26 IST
ಕುಂದಗೋಳ ತಾ.ಪಂ.ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆಯಲ್ಲಿ  ಮಹಿಳೆಯರು ಮತ ಚಲಾಯಿಸಿದರು.
ಕುಂದಗೋಳ ತಾ.ಪಂ.ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆಯಲ್ಲಿ ಮಹಿಳೆಯರು ಮತ ಚಲಾಯಿಸಿದರು.   

ಹುಬ್ಬಳ್ಳಿ:ಕುಂದಗೋಳ ಕ್ಷೇತ್ರದ ಅಂಚಟೇರಿ ಗ್ರಾಮದಲ್ಲಿ ಉಪಚುನಾವಣೆಯ ಕಾವು ಜೋರಿದ್ದು, ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳಲುತ್ತಿದ್ದಾರೆ.

ಬೆಳಗ್ಗಿನ ಬಿಸಿಲು ಏರುತ್ತಿದ್ದಾ ಹಾಗೆ ಕುಟುಂಬ ಸಮೀತ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.

ಬೆಳಿಗ್ಗೆನ 9:30ರ ಸುಮಾರಿಗೆ ಮತಗಟ್ಟೆ ಸಂಖ್ಯೆ 7ರ 1126 ಮತದಾರ ಪೈಕಿ 236 ಮತದಾರರು, ಮತಗಟ್ಟೆ ಸಂಖ್ಯೆ 8ರ 434 ಮತದಾರಲ್ಲಿ 106, ಮತಗಟ್ಟೆ ಸಂಖ್ಯೆ 9ರ 796 ಮತದಾರಲ್ಲಿ 134, ಹಾಗೂ ಮತಗಟ್ಟೆ ಸಂಖ್ಯೆ 10ರ 779 ಮತದಾರರಲ್ಲಿ 137 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ‌.

ADVERTISEMENT

ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಐ. ಚಿಕ್ಕನಗೌಡ ಅದರಗುಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಅವರು, ಈ ಬಾರಿ ಕುಂದಗೋಳದಲ್ಲಿ ಬಿಜೆಪಿ ಪರ ಅಲೆಯಿದೆ. ಕಳೆದ ಬಾರಿ ನಾನು 634 ಮತಗಳಿಂದ ಸೋತಿದ್ದೆ. ಈ ಬಾರಿ 21 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಗೆಲುವು ನನ್ನದೇ ಎಂದು ಹೇಳಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಅದರಗುಂಚಿಯಲ್ಲಿ 101 ವರ್ಷದ ದೊಡ್ಡೇಶಪ್ಪ ಪೂಜಾರ ವೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಇದುವರೆಗೆ ಒಮ್ಮೆಯೂ ಮತದಾನ ತಪ್ಪಿಸಿಲ್ಲ ಎಂದು‌ ಹೆಮ್ಮೆ ವ್ಯಕ್ತಪಡಿಸಿದ ಪೂಜಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.