ADVERTISEMENT

ಅನಂತರಾಮು ಸೇರಿ ಐವರಿಗೆ 'ಗೌರವ ಪ್ರಶಸ್ತಿ'

2021ನೇ ಸಾಲಿನ ಪ್ರಶಸ್ತಿ ಘೋಷಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 10:05 IST
Last Updated 20 ನವೆಂಬರ್ 2021, 10:05 IST
ಪ್ರೊ.ಟಿ.ಆರ್. ಅನಂತರಾಮು
ಪ್ರೊ.ಟಿ.ಆರ್. ಅನಂತರಾಮು   

ಬೆಂಗಳೂರು:ಕುವೆಂಪುಭಾಷಾಭಾರತಿಪ್ರಾಧಿಕಾರ ಕೊಡಮಾಡುವ 2021ನೇ ಸಾಲಿನ ‘ಗೌರವಪ್ರಶಸ್ತಿ’ಗೆ ವಿಜ್ಞಾನ ಲೇಖಕ ಪ್ರೊ.ಟಿ.ಆರ್. ಅನಂತರಾಮು, ಲೇಖಕಿ ಡಾ. ಗೀತಾ ಶೆಣೈ ಸೇರಿದಂತೆಐವರು ಆಯ್ಕೆಯಾಗಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷಅಜಕ್ಕಳ ಗಿರೀಶ ಭಟ್ ನೇತೃತ್ವದಲ್ಲಿ ನಡೆದಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ವಿದ್ವಾಂಸ ಡಾ.ಟಿ.ಜಿ. ಪ್ರಭಾಶಂಕರ ಪ್ರೇಮಿ, ಅನುವಾದಕ ಈಶ್ವರಚಂದ್ರ ಹಾಗೂ ಲೇಖಕ ಡಾ. ರಾಜಾರಾಮ್ ಹೆಗಡೆ ಅವರೂ ‘ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

‘ಗೌರವಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 2020ನೇ ಸಾಲಿನಲ್ಲಿ ಪ್ರಥಮಾವೃತ್ತಿಯಲ್ಲಿ ಅನುವಾದಗೊಂಡಿರುವ ಐದು ಅನುವಾದಿತ ಪುಸ್ತಕಗಳಿಗೆ ‘ಪುಸ್ತಕ ಬಹುಮಾನ’ ಪ್ರಕಟಿಸಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ADVERTISEMENT

ಪುಸ್ತಕ ಬಹುಮಾನ: ‘ದ ಬ್ರೈಡ್‌ ಇನ್ ದ ರೈನಿ ಮಂಟೆನ್ಸ್ (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಅನುವಾದ)–ಡಾ.ಕೆಂ. ಶ್ರೀನಿವಾಸಗೌಡ ಮತ್ತು ಜಿ.ಕೆ. ಶ್ರೀಕಂಠಮೂರ್ತಿ (ಕನ್ನಡದಿಂದ ಇಂಗ್ಲಿಷಿಗೆ), ‘ನನ್ನ ಬದುಕಿನ ಕಥೆ’–ಶ್ರುತಿ ಬಿ.ಎಸ್. (ಇಂಗ್ಲಿಷ್‌ನಿಂದ ಕನ್ನಡಕ್ಕೆ), ‘ಭೂತನಾಥ’–ಡಾ. ನಾಗಾ ಎಚ್‌.ಹುಬ್ಳಿ (ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ವಿಶ್ವನಾಥ ಸತ್ಯನಾರಾಯಣ’–ಟಿ.ಎಸ್. ನಾಗಾರಾಜ ಶೆಟ್ಟಿ (ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ), ‘ರುಚಿರಾ:ಬಾಲಕಥಾ’–ಡಾ. ನಾಗರತ್ನಾ ಹೆಗಡೆ (ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ)ಅವರು ‘ಪುಸ್ತಕ ಬಹುಮಾನಕ್ಕೆ’ ಆಯ್ಕೆಯಾಗಿದ್ದಾರೆ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ ಕು. ಮಿರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.