ADVERTISEMENT

ಲಾಲ್‌ಬಾಗ್‌, ಮಾರತ್ತಹಳ್ಳಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 14 ಮೇ 2020, 14:06 IST
Last Updated 14 ಮೇ 2020, 14:06 IST
ಪಾಸ್ ಪೋರ್ಟ್ ಕಚೇರಿ ಶುಕ್ರವಾರದಿಂದ ಪುನರಾರಂಭ
ಪಾಸ್ ಪೋರ್ಟ್ ಕಚೇರಿ ಶುಕ್ರವಾರದಿಂದ ಪುನರಾರಂಭ   

ಬೆಂಗಳೂರು: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಶುಕ್ರವಾರದಿಂದ (ಮೇ15) ನಗರದ ಲಾಲ್‌ಬಾಗ್ ಮತ್ತು ಮಾರತಹಳ್ಳಿಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಪುನರಾರಂಭಗೊಳ್ಳಲಿವೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಭರತ್‌ಕುಮಾರ್‌ ಕುತಾಟಿ ತಿಳಿಸಿದ್ದಾರೆ.

‘ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಜೊತೆಗೆ ಸಾನಿಟೈಸರ್‌ ಇರಬೇಕು. ಅಂತರ ಕಾಪಾಡುವುದೂ ಕಡ್ಡಾಯ ಅಲ್ಲದೆ, ತಮ್ಮ ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT