ADVERTISEMENT

ಎಚ್.ಎಸ್.ದೊರೆಸ್ವಾಮಿ ಪತ್ನಿ ಲಲಿತಮ್ಮ ನಿಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 17:17 IST
Last Updated 17 ಡಿಸೆಂಬರ್ 2019, 17:17 IST
ಲಲಿತಮ್ಮ ದೊರೆಸ್ವಾಮಿ
ಲಲಿತಮ್ಮ ದೊರೆಸ್ವಾಮಿ   

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ (89) ಅವರು ಮಂಗಳವಾರ ಜಯದೇವ ಆಸ್ಪತ್ರೆಯಲ್ಲಿನಿಧನರಾದರು.

ಅವರಿಗೆ ಪತಿ ದೊರೆಸ್ವಾಮಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ಪಾರ್ಥಿವ ಶರೀರವನ್ನು ಜಯನಗರದ 4ನೇ ಟಿ ಬ್ಲಾಕ್‌‌ನ ಮನೆಯಲ್ಲಿ ಅಂತಿಮ‌ ದರ್ಶನಕ್ಕೆ ಇಡಲಾಗಿತ್ತು. ನಂತರ, ಶರೀರವನ್ನು ಕಿಮ್ಸ್‌ ಆಸ್ಪತ್ರೆಗೆ ದಾನ ಮಾಡಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ದೊರೆಸ್ವಾಮಿ ಅವರು ತಮ್ಮ 31ನೇ ವಯಸ್ಸಿನಲ್ಲಿ (1950ರ ಡಿಸೆಂಬರ್‌ನಲ್ಲಿ) ಲಲಿತಮ್ಮ ಅವರನ್ನು ಮದುವೆ ಆಗಿದ್ದರು.

ADVERTISEMENT

‘ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಸ್ನೇಹಿತರ ಜೊತೆ ಪಗಡೆ ಆಟವಾಡಲು ಹೋಗಿದ್ದಾಗ ಲಲಿತಮ್ಮಳನ್ನು ನೋಡಿದ್ದೆ. ಆಗಲೇ ಆಕೆಯ ತಂದೆ–ತಾಯಿ, ಮಗಳನ್ನು ಮದುವೆಯಾಗುವಂತೆ ಕೇಳಿದ್ದರು. ತಾಯಿಯ ಒಪ್ಪಿಗೆ ಪಡೆದು ಆಕೆಯನ್ನು ಮದುವೆಯಾದೆ. ಯಾವುದೇ ಜಾತಕ, ಕುಲ– ಗೋತ್ರ ನೋಡಿರಲಿಲ್ಲ’ ಎಂದು ದೊರೆಸ್ವಾಮಿ ನೆನಪು ಮಾಡಿಕೊಂಡರು.

ಲಲಿತಮ್ಮ ದೊರೆಸ್ವಾಮಿ
ಪತಿ ಎಚ್.ಎಸ್.ದೊರೆಸ್ವಾಮಿ ಅವರೊಂದಿಗೆ ಲಲಿತಮ್ಮ (ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.