ADVERTISEMENT

ಕೊಡಗು ಸಂಪೂರ್ಣ ಲಾಕ್‌ಡೌನ್‌

ಮಧ್ಯಾಹ್ನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:18 IST
Last Updated 24 ಮಾರ್ಚ್ 2020, 14:18 IST
   

ಮಡಿಕೇರಿ: ಕೊಡಗು ಜಿಲ್ಲೆಯು, ಮೂರು ದಿನಗಳಿಂದ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ಜಿಲ್ಲೆಯ ಒಳಗಿದ್ದವರಿಗೆ ಹೊರ ಹೋಗಲು ಬಿಡುತ್ತಿಲ್ಲ. ಜಿಲ್ಲೆಯ ಹೊರಗಿಂದಲೂ ಯಾರೂ ಒಳಬರಲು ಸಾಧ್ಯವಾಗುತ್ತಿಲ್ಲ.

ಮೈಸೂರು ಮಾರ್ಗದ ಕೊಪ್ಪ, ಹಾಸನ ಮಾರ್ಗದ ಶಿರಂಗಾಲ ಹಾಗೂ ಕೊಡ್ಲಿಪೇಟೆ, ಮಂಗಳೂರು ಮಾರ್ಗದ ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು ದಿನ 24 ಗಂಟೆಯೂ ಪೊಲೀಸರು ನಿಗಾ ಇಟ್ಟಿದ್ದಾರೆ. ಜಿಲ್ಲೆಯ ಹೊರಗೆ ಹಾಸ್ಟೆಲ್‌ನಲ್ಲಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಒಳಬರಲು ಅವಕಾಶ ಕಲ್ಪಿಸಲಾಗಿದೆ. ಅನಿವಾರ್ಯ ಕಾರಣಕ್ಕೆ ಜಿಲ್ಲೆ ಪ್ರವೇಶಿಸುವ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ ಪ್ರವೇಶ ನೀಡಲಾಗುತ್ತಿದೆ.

ಇನ್ನು ಜಿಲ್ಲೆಯ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಬೆಳಿಗ್ಗೆ 6ರಿಂದ 8 ಗಂಟೆಯ ತನಕ ದಿನಪತ್ರಿಕೆ, ಹಾಲು ಖರೀದಿ ಹಾಗೂ ಮಧ್ಯಾಹ್ನ 12ರಿಂದ 2ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಅದನ್ನು ಹೊರತು ಪಡಿಸಿದ ಸಮಯದಲ್ಲಿ ಯಾರನ್ನೂ ಮನೆಯಿಂದ ಹೊರ ಬರಲು ಅವಕಾಶ ನೀಡುತ್ತಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.