ADVERTISEMENT

ತೋಟದಲ್ಲೇ ಉಳಿದ ಟೊಮೆಟೊ: 15 ಕೆಜಿ ತೂಕದ ಟೊಮೆಟೊ ಬಾಕ್ಸ್ ಬೆಲೆ ₹15

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:50 IST
Last Updated 27 ಏಪ್ರಿಲ್ 2020, 19:50 IST
ಮುಳಬಾಗಿಲು ತಾಲ್ಲೂಕು ಯಲವಹಳ್ಳಿ ಗ್ರಾಮದ ರೈತ ಪ್ರಭಾಕರ್‌ ಅವರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ
ಮುಳಬಾಗಿಲು ತಾಲ್ಲೂಕು ಯಲವಹಳ್ಳಿ ಗ್ರಾಮದ ರೈತ ಪ್ರಭಾಕರ್‌ ಅವರ ಜಮೀನಿನಲ್ಲಿ ಬೆಳೆದಿರುವ ಟೊಮೆಟೊ   

ಮುಳಬಾಗಿಲು: ತಾಲ್ಲೂಕಿನ ಕಸಬಾ ಹೋಬಳಿ ಯಲವಹಳ್ಳಿ ಗ್ರಾಮದ ರೈತ ಪ್ರಭಾಕರ್‌ ಅವರು ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿರುವ ಟೊಮೆಟೊಗೆ ಮಾರುಕಟ್ಟೆಯೂ ಇಲ್ಲದೆ, ಹಣ್ಣನ್ನೂ ಕೊಯ್ಲು ಮಾಡಲಾಗದೆ, ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ.

ಹೊರ ಜಿಲ್ಲೆ, ರಾಜ್ಯಗಳಿಗೆ ಟೊಮೊಟೊ ರವಾನಿಸಲು ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ. ಇದರಿಂದಾಗಿ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ರೈತರ ಅಳಲು.

ತಾಲ್ಲೂಕಿನ ತೊರಡಿ ಗ್ರಾಮದ ಚಂದ್ರಶೇಖರ್ ಅವರು ಕಂದಾಯ ಇಲಾಖೆ ನಿವೃತ್ತ ನೌಕರ. ಮೂರು ವರ್ಷದ ಹಿಂದೆ ನಿವೃತ್ತರಾದ ಬಳಿಕ ಜಮೀನಿನ ಫಲವತ್ತತೆಗಾಗಿ ನಿವೃತ್ತಿಯಿಂದ ಬಂದ ಹಣವನ್ನೆಲ್ಲಾ ತೊಡಗಿಸಿದ್ದರು. ಅವರ ಎರಡು ಎಕರೆಯಲ್ಲಿ ಈಗ ಸುಮಾರು ನೂರು ಟನ್‌ಗಳಷ್ಟು ಟೊಮೆಟೊ ಫಸಲಿದೆ. ಅದರೆ, ಕೇಳುವವರೇ ಇಲ್ಲವಾಗಿದ್ದಾರೆ.

ADVERTISEMENT

ತಾಲ್ಲೂಕಿನ ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ 15 ಕೆ.ಜಿ ತೂಗುವ ಟೊಮೆಟೊ ಬಾಕ್ಸ್ ಒಂದರ ಬೆಲೆ ಸೋಮವಾರ ₹15ರಿಂದ ₹20 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.