ADVERTISEMENT

ತೀವ್ರಗೊಂಡ ಬೆಟ್ಟಿಂಗ್‌ ಭರಾಟೆ?

ಲೋಕಸಭಾ ಚುನಾವಣೆ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 20 ಮೇ 2019, 18:30 IST
Last Updated 20 ಮೇ 2019, 18:30 IST
ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್
ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್   

ಮಂಡ್ಯ: ಲೋಕಸಭಾ ಚುನಾವಣೆಯ ಸಮೀಕ್ಷಾ ವರದಿಗಳು ಹೊರಬರುತ್ತಿದ್ದಂತೆ, ಜಿಲ್ಲೆಯಾದ್ಯಂತ ಬೆಟ್ಟಿಂಗ್‌ ತೀವ್ರಗೊಂಡಿದ್ದಾಗಿ ತಿಳಿದುಬಂದಿದೆ.

ಮತದಾನ ಮುಗಿದ ನಂತರ, ಮೈತ್ರಿ ಪಕ್ಷದ ಅಭ್ಯರ್ಥಿ ಪರ ನಿಖಿಲ್‌ ಪರ ಹೆಚ್ಚು ಜನ ಹಣ ಕಟ್ಟುತ್ತಿದ್ದರು. ನಿಖಿಲ್‌ ಪರ ₹ 1ಲಕ್ಷ ಕಟ್ಟಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ₹ 80 ಸಾವಿರ ಕಟ್ಟಲು ಮುಂದಾಗುತ್ತಿದ್ದರು. ಸಮೀಕ್ಷಾ ವರದಿ ಬಹಿರಂಗವಾಗುತ್ತಿದ್ದಂತೆ ಬೆಟ್ಟಿಂಗ್‌ ಸಮಬಲಕ್ಕೆ ಬಂದಿದೆ ಎನ್ನಲಾಗಿದೆ.

‘ಪ್ರತಿ ಹಳ್ಳಿಯಲ್ಲಿ ನಂಬಿಕಸ್ಥ ವ್ಯಕ್ತಿಯನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು ಹಣ ಕಟ್ಟುತ್ತಿದ್ದಾರೆ. ನಗರ ಹಾಗೂ ಪಟ್ಟಣಗಳಲ್ಲಿ ಬೆಟ್ಟಿಂಗ್‌ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಯ ಸದಸ್ಯರೇ ಬೆಟ್ಟಿಂಗ್‌ ಪ್ರಕ್ರಿಯೆ ನೋಡಿಕೊಳ್ಳುತ್ತಿದ್ದಾರೆ. ಅವರ ಉಸ್ತುವಾರಿಯಲ್ಲೇ ಜನರು ಹಣ ಕಟ್ಟುತ್ತಿದ್ದಾರೆ.ನಗರಸಭಾ ಸದಸ್ಯರೊಬ್ಬರು ಮಧ್ಯವರ್ತಿಯಾಗಿ ₹ 1 ಕೋಟಿ ವ್ಯವಹಾರ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಭಾನುವಾರ ಸಮೀಕ್ಷಾ ವರದಿ ಪ್ರಕಟವಾದ ನಂತರ ಸೋಮವಾರದಿಂದ ಭರಾಟೆ ಹೆಚ್ಚಳವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜಕೀಯ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

20–20ರ ಕುತೂಹಲ!: ಸಂಖ್ಯಾಶಾಸ್ತ್ರವನ್ನು ನಂಬುವ ಕೆಲವರು 20–20 ಸಂಖ್ಯೆಗಳ ಮೊರೆ ಹೋಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಮೇ 20ರಂದು ಬೆಟ್ಟಿಂಗ್‌ ಕಟ್ಟಿದರೆ 20–20 ಸಂಖ್ಯೆಗಳ ಅದೃಷ್ಟ ಒಲಿಯುತ್ತದೆ ಎಂದು ನಂಬಿದ್ದಾರೆ ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ಇಲ್ಲ

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌, ‘ಬೆಟ್ಟಿಂಗ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ಅಥವಾ ದೂರು ಬಂದರೆ ಪ್ರಕರಣ ದಾಖಲು ಮಾಡುತ್ತೇವೆ. ಅದಕ್ಕಾಗಿಯೇ ತಂಡವೊಂದಕ್ಕೆ ಜವಾಬ್ದಾರಿ ನೀಡಲಾಗಿದೆ’ ಎಂದು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌, ‘ಬೆಟ್ಟಿಂಗ್‌ ನಡೆಯುತ್ತಿರುವ ಬಗ್ಗೆ ಮಾಹಿತಿ ಅಥವಾ ದೂರು ಬಂದರೆ ಪ್ರಕರಣ ದಾಖಲು ಮಾಡುತ್ತೇವೆ. ಅದಕ್ಕಾಗಿಯೇ ತಂಡವೊಂದಕ್ಕೆ ಜವಾಬ್ದಾರಿ ನೀಡಲಾಗಿದೆ’ ಎಂದು ತಿಳಿಸಿದರು.

20–20ರ ಕುತೂಹಲ!

ಸಂಖ್ಯಾಶಾಸ್ತ್ರವನ್ನು ನಂಬುವ ಕೆಲವರು 20–20 ಸಂಖ್ಯೆಗಳ ಮೊರೆ ಹೋಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿದ್ದು ಮೇ 20ರಂದು ಬೆಟ್ಟಿಂಗ್‌ ಕಟ್ಟಿದರೆ 20–20 ಸಂಖ್ಯೆಗಳ ಅದೃಷ್ಟ ಒಲಿಯುತ್ತದೆ ಎಂದು ನಂಬಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.