ADVERTISEMENT

ಡೀಸೆಲ್ ದರ ಇಳಿಸುವಂತೆ ಲಾರಿ ಮಾಲೀಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:30 IST
Last Updated 27 ಜುಲೈ 2020, 21:30 IST

ಬೆಂಗಳೂರು: ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆ ದುಬಾರಿಯಾಗಿದ್ದು, ಕಡಿಮೆ ಮಾಡಬೇಕು ಎಂದು ರಾಜ್ಯ ಲಾರಿ ಮಾಲೀಕರ ಒಕ್ಕೂಟ ಹಾಗೂ ಏಜೆಂಟರ ಸಂಘ ಸೋಮವಾರ ಒತ್ತಾಯಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, 'ಡೀಸೆಲ್ ದರ ಏರುತ್ತಿದೆ. ಸರ್ಕಾರ ಡೀಸೆಲ್ ಮೇಲೆ ಶೇ 24ರಷ್ಟು ದುಬಾರಿ ತೆರಿಗೆ ವಿಧಿಸುತ್ತಿದೆ. ಇದರಿಂದ ಲಾರಿ ಮಾಲೀಕರು ಪ್ರತಿ 100 ಲೀಟರ್‌ಗೆ ₹1,500 ಹೆಚ್ಚುವರಿ ತೆರಿಗೆ ಪಾವತಿಸಬೇಕಿದೆ. ₹3 ಕಡಿಮೆ ಮಾಡಿದರೆಲಾರಿ ಮಾಲೀಕರು ಹಾಗೂ ಸರ್ಕಾರಕ್ಕೂ ಅನುಕೂಲ' ಎಂದರು.

'ಲಾಕ್‍ಡೌನ್‍ನಿಂದ ವಹಿವಾಟು ನಡೆಸದೆ ಸ್ಥಗಿತಗೊಂಡಿರುವ ಲಾರಿಗಳಿಗೆ ದಂಡದೊಂದಿಗೆ ತೆರಿಗೆ ಕಟ್ಟುವಂತೆ ಸಾರಿಗೆ ಕಚೇರಿಗಳಲ್ಲಿ ಕಿರುಕುಳ ನೀಡಲಾಗುತ್ತಿದೆ. ಸೆಪ್ಟೆಂಬರ್‌ ವರೆಗೆ ತೆರಿಗೆ ವಿನಾಯಿತಿ ನೀಡಬೇಕು. 2021ರ ಮಾರ್ಚ್‍ವರೆಗೆ ಎಲ್ಲ ಟೋಲ್‍ಗಳನ್ನು ಸ್ಥಗಿತಗೊಳಿಸಬೇಕು. ವಾಹನ ಸಾಲದ ಕಂತು ಪಾವತಿಸಲು ಆಗಸ್ಟ್ ಅಂತ್ಯದವರೆಗೆ ಕಾಲಾವಕಾಶ ನೀಡಬೇಕು. ಲಾರಿ ಚಾಲಕರಿಗೂ ಸರ್ಕಾರ ಪ್ರೋತ್ಸಾಹಧನ ಹಾಗೂ ಆರೋಗ್ಯ ವಿಮೆ ಜಾರಿ ಮಾಡಬೇಕು' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.