ದೇವರಹಿಪ್ಪರಗಿ: ಭಾನುವಾರ ರಾತ್ರಿ ಸಂಭವಿಸಿದ ಚಂದ್ರಗ್ರಹಣದ ಮೂಲಕ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವರು ಕೆಂಪು ಚಂದ್ರನನ್ನು ಕಣ್ತುಂಬಿಕೊಂಡರು.
ಪಟ್ಟಣದಲ್ಲಿ ಕೆಲವರು ರಾತ್ರಿ 11 ಗಂಟೆಯಿಂದಲೇ ಎಚ್ಚರವಾಗಿದ್ದು ಬದಲಾಗುತ್ತಿರುವ ಚಂದ್ರನ ಬಣ್ಣವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿಯುವಲ್ಲಿ ನಿರತರಾಗಿದ್ದರು. ಅದರಲ್ಲೂ 12 ರಿಂದ 12.30 ರ ನಡುವಿನ ಅವಧಿಯಲ್ಲಿ ಬಹುತೇಕ ಕೆಂಬಣ್ಣಕ್ಕೆ ತಿರುಗಿದ ಚಂದ್ರಮ ಅಕ್ಷರಶ ರಕ್ತಚಂದಿರನಂತೆ ಕಂಡು ಬಂದನು.
ಚಂದ್ರಗ್ರಹಣದ ಅಂಗವಾಗಿ ಭಾನುವಾರ ಕೆಲವರು ಜೋತಿಷ್ಯದ ಅನುಗುಣವಾಗಿ ಮಧ್ಯಾಹ್ನವೇ ಊಟೋಪಚಾರ ಮುಗಿಸಿದರೆ ಇನ್ನೂ ಕೆಲವರು ಸಾಯಂಕಾಲ ಬೇಗನೇ ಊಟ ಮುಗಿಸಿದರು. ರಾತ್ರಿ ಚಂದ್ರಗ್ರಹಣ ಆರಂಭವಾಗುತ್ತಿದ್ದಂತೆಯೇ ವಿವಿಧ ರಾಶಿಫಲಗಳಿಗೆ ಅನುಗುಣವಾಗಿ ಪೂಜೆ ಸಹಿತ ವಿವಿಧ ಧಾರ್ಮಿಕ ಕ್ರಿಯೆಗಳಲ್ಲಿ ನಿರತರಾದರು.
ಸೋಮವಾರ ಬೆಳಿಗ್ಗೆ ಎದ್ದು ಸ್ನಾನ ಕರ್ಮಾದಿ ಮುಗಿಸಿ ದೋಷಗಳಿಗೆ ಅನುಗುಣವಾಗಿ ಮನೆ ಹಾಗೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಂಡಿದ್ದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.