
ಉಡುಪಿ: ‘ಸುಭದ್ರ ಸರ್ಕಾರ ನೀಡಲು ಪ್ರಯತ್ನಿಸಬೇಕು. ಅಧಿಕಾರ ಹಂಚಿಕೆ ಸಾರ್ವಜನಿಕ ಚರ್ಚೆಯ ವಸ್ತು ಆಗಬಾರದು’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಸೋಮವಾರ ಇಲ್ಲಿ ಹೇಳಿದರು.
ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನಿವಾರ್ಯತೆ, ಅವಶ್ಯಕತೆ ಇದ್ದರೆ ಹೈಕಮಾಂಡ್ ತೀರ್ಮಾನಿಸಬೇಕೇ ಹೊರತು ಸಾರ್ವಜನಿಕವಾಗಿ ಚರ್ಚೆ ಸರಿಯಲ್ಲ’ ಎಂದು ಹೇಳಿದರು.
‘ಏನೇ ಕೋಪವಿದ್ದರೂ ಸಂಪುಟ ಸಭೆ ನಿರಾತಂಕವಾಗಿ ನಡೆಯುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನ ಆಗುತ್ತಿವೆ. ನಮಗೆ ಬೇಕಾಗಿರುವುದು ಅಷ್ಟೇ. ಅವರು ಪರಸ್ಪರ ಅಪ್ಪಿಕೊಳ್ಳಲಿ ಅಥವಾ ಮುನಿಸಿಕೊಳ್ಳಲಿ ಜನರಿಗೆ ಬೇಕಾದದ್ದು ಉತ್ತಮ ಆಡಳಿತ’ ಎಂದು ತಿಳಿಸಿದರು.
‘ಸಚಿವರಾಗಬೇಕು ಎಂದು ಹಂಬಲಿಸುವವರು ಇರುತ್ತಾರೆ. ಮುಖ್ಯಮಂತ್ರಿ ಆಗಬೇಕು ಎಂದು ಹಂಬಲಿಸುವುದು ತಪ್ಪಲ್ಲ, ಆದರೆ ಅದು ಸಾರ್ವಜನಿಕ ಚರ್ಚೆಯ ವಸ್ತು ಆಗಲೇಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.