ADVERTISEMENT

ಹುಬ್ಬಳ್ಳಿ: ಅಮಿತ್ ಶಾ ಭೇಟಿಯಾದ ಮಹದಾಯಿ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 15:59 IST
Last Updated 18 ಜನವರಿ 2020, 15:59 IST
ಮಹದಾಯಿ ಹೋರಾಟಗಾರರು
ಮಹದಾಯಿ ಹೋರಾಟಗಾರರು   

ಹುಬ್ಬಳ್ಳಿ: ಮಹದಾಯಿ ವಿವಾದವನ್ನು ಆದಷ್ಟು ಬೇಗನೆ ಪರಿಹರಿಸಬೇಕು ಎಂದು ಹೋರಾಟಗಾರರು ಅಮಿತ್ ಶಾ ಅವರನ್ನು ಭೇಟಿ ಮಾಡಿ‌ ಮನವಿ ಸಲ್ಲಿಸಿದರು.

ನವಲಗುಂದ ಶಾಸಕ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಶಾ ಅವರನ್ನು ಭೇಟಿ ಮಾಡಿಸಲೇಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದರು. ಆದ್ದರಿಂದ ಶಾ ಎರಡು ನಿಮಿಷ ಸಮಯ ನೀಡಿದ್ದರು.

ಮಹದಾಯಿ ಸಮಸ್ಯೆ ತುರ್ತಾಗಿ ಪರಿಹರಿಸಬೇಕು ಎನ್ನುವುದು ನಮಗೂ ಗೊತ್ತಿದೆ. ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದು ಶಾ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದರು.

ADVERTISEMENT

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮಹದಾಯಿ ನೀರಿಗಾಗಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಟ್ಟಿಗೆ ಸಭೆ ನಡೆಸಿದ್ದರು. ಅಮಿತ್ ಶಾ ನಗರಕ್ಕೆ ಬಂದಾಗ ಎಲ್ಲ ಪಕ್ಷದವರು ಸೇರಿ ಮನವಿ ಕೊಟ್ಟಿದ್ದರೆ ಹೆಚ್ವು ಪರಿಣಾಮಕಾರಿಯಾಗುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಯಾರೂ ಪ್ರಯತ್ನಿಸಲಿಲ್ಲ ಎಂದು ಹೋರಾಟಗಾರರು ‌ಬೇಸರ‌ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.