ADVERTISEMENT

ಬಿಜೆಪಿಯವರು ಕೆಲಸ ಮಾಡುವುದನ್ನು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 10:40 IST
Last Updated 27 ಆಗಸ್ಟ್ 2019, 10:40 IST
   

ಬೆಂಗಳೂರು:ಬಿಜೆಪಿಯವರು ಜನರ ಕೆಲಸ ಮಾಡುವುದನ್ನ ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ. ಅವರೀಗನಾನು ಮೇಲೋ ನೀನು ಮೇಲೋ ಅಂತಿದ್ದಾರೆ ಎಂದುಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂಸಿಎಂ‌ ಒಬ್ಬರೇ ಓಡಾಡುತ್ತಿದ್ದಾರೆ. ಮಂತ್ರಿ ಮಂಡಲ ರಚನೆ ಮಾಡೋದಕ್ಕೆ 26 ದಿನ ತೆಗೆದುಕೊಂಡರು. ಅದಾದಮೇಲೆ ಖಾತೆ ಹಂಚಿಕೆಗೆ ನಾಲ್ಕೈದು ದಿನ ಆಯ್ತು. ಯಡಿಯೂರಪ್ಪ ಅವರಿಗೆಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಪ್ರವಾಹದಿಂದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ತೊಂದರೆಯನ್ನು ಕೇಳುವ, ನೋಡುವವರು ಯಾರೂ ಇಲ್ಲ.

ADVERTISEMENT

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎಲ್ಲಿ ಮಳೆ ಬೀಳಬೇಕೋ ಅಲ್ಲಿ ಮಳೆಯೇ ಇಲ್ಲ. ಬರವೂ ಕೂಡ ರಾಜ್ಯದ ಜನರನ್ನ ಕಂಗಾಲಾಗುವಂತೆ ಮಾಡಿದೆ. ಎರಡು ತಿಂಗಳಿಂದ ರಾಜ್ಯದ ಜನರಿಗೆ ತೊಂದರೆ ಆಗುತ್ತಿದೆ. ಯಾವಾಗಲೂ ಇವರು ರೈತರ ಹೆಸರು ಹೇಳುತ್ತಾರೆ. ಆದರೆ ಈ ಸರ್ಕಾರ ರೈತರ ಪರ ಇಲ್ಲ ಎಂದಿದ್ದಾರೆ ಖರ್ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.