ADVERTISEMENT

ಫಾಝಿಲ್ ಹತ್ಯೆ ಪ್ರಕರಣ | ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಕಮಿಷನರ್ 

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 9:52 IST
Last Updated 29 ಜುಲೈ 2022, 9:52 IST
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್   

ಸುರತ್ಕಲ್: ಮಹಮ್ಮದ್ ಫಾಝಿಲ್‌ ಹತ್ಯೆ ತನಿಖೆಯ ಹಂತದಲ್ಲಿದ್ದು, ಕಾರಣ ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು,ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಸಂಬಂಧಿಸಿದ ವಿಚಾರದ ಬಗ್ಗೆ ಹಾಕುತ್ತಿರುವ ಪೋಸ್ಟ್ಗಳನ್ನು ಗಮನಿಸಲಾಗುತ್ತಿದೆ. ಸೈಬರ್ ಕ್ರೈ ಪೊಲೀಸರ ಸಹಕಾರ ಪಡೆದು, ಇಂತಹವರ‌ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಫಾಝಿಲ್ ಮನೆಗೆ ಭೇಟಿ: ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಪಾಝಿಲ್ ತಂದೆ ಹಾಗೂ ಕುಟುಂಬ ಸದಸ್ಯರನ್ನು‌ ಭೇಟಿಯಾಗಿ ಸಾಂತ್ವನ ಹೇಳಿದರು.

ADVERTISEMENT

ಯಾವುದೇಅಹಿತಕರ ಘಟನೆಗೆ ಅವಕಾಶ ನೀಡದೆ, ಶಾಂತಿಯಿಂದ ಅಂತ್ಯಕ್ರಿಯೆ ನೆರವೇರಿಸಿದ್ದಕ್ಕೆ ಸರ್ವರನ್ನು ಅಭಿನಂದಿಸಿದರು.

ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ, ಐವನ್ ಡಿಸೋಜ, ಮುಸ್ಲಿಂ ಜಮಾತ್ ಅಧ್ಯಕ್ಷ ಮಮ್ತಾಜ್ ಅಲಿ, ಸರ್ಫರಾಜ್, ಮುನೀರ್ ಕಾಟಿಪಳ್ಳ, ಶರೀಫ್‌ ಎಂ.ಎಸ್., ಅಬುಬಕ್ಕರ್ ಕುಳಾಯಿ ಸ್ಥಳದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.