ADVERTISEMENT

ಪ್ರಚಾರದಿಂದ ಮದುವೆ ತಾಳಿ ಕಾರ್ಯಕ್ಕೆ ವಿಳಂಬ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 10:21 IST
Last Updated 28 ನವೆಂಬರ್ 2019, 10:21 IST
ಹೊಸಪೇಟೆ ತಾಲ್ಲೂಕಿನ ಗಾದಿಗನೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪ್ರಚಾರದ ಸಂದರ್ಭದಲ್ಲಿ ಮದುವೆಗೆ ಹೋಗುತ್ತಿದ್ದ ವರನ ಸಂಬಂಧಿಕರ ವಾಹನ ಜನರ ಮಧ್ಯೆ ನಿಂತಿರುವುದು
ಹೊಸಪೇಟೆ ತಾಲ್ಲೂಕಿನ ಗಾದಿಗನೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಪ್ರಚಾರದ ಸಂದರ್ಭದಲ್ಲಿ ಮದುವೆಗೆ ಹೋಗುತ್ತಿದ್ದ ವರನ ಸಂಬಂಧಿಕರ ವಾಹನ ಜನರ ಮಧ್ಯೆ ನಿಂತಿರುವುದು   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲ್ಲೂಕಿನ ಗಾದಿಗನೂರಿನಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರಚಾರ ಕೈಗೊಂಡಿದ್ದರಿಂದ ಮದುವೆ ತಾಳಿ ಕಾರ್ಯಕ್ಕೆ ಹೋಗಬೇಕಿದ್ದ ವರನ ಸಂಬಂಧಿಕರು ತಡವಾಗಿ ಹೋಗಬೇಕಾಯಿತು.

ಹೊಸಪೇಟೆ–ಬಳ್ಳಾರಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63 ಕಿರಿದಾಗಿದ್ದು, ಅದರ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ರ್‍ಯಾಲಿ ನಡೆಸಿದರು. ಬಳಿಕ ಮುಖ್ಯರಸ್ತೆಯಲ್ಲೇ ಸಿದ್ದರಾಮಯ್ಯನವರು ಭಾಷಣ ಮಾಡಿದರು. ಈ ವೇಳೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಬಳ್ಳಾರಿಯಲ್ಲಿ ಆಯೋಜಿಸಿದ್ದ ಮದುವೆ ತಾಳಿ ಕಾರ್ಯದಲ್ಲಿ ಪಾಲ್ಗೊಳ್ಳಲು ಮುಂಡರಗಿಯಿಂದ ವರನ ಸಂಬಂಧಿಕರು ಹೊರಟಿದ್ದರು. ಅವರ ವಾಹನ ಜನರ ಮಧ್ಯೆ ಸಿಲುಕಿಕೊಂಡಿತ್ತು. ‘ಮದುವೆ ತಾಳಿ ಕಾರ್ಯಕ್ಕೆ ವಿಳಂಬವಾಗುತ್ತಿದೆ. ನಮಗೆ ಹೋಗಲು ಅವಕಾಶ ಮಾಡಿಕೊಡಿ’ ಎಂದು ಪೊಲೀಸರಿಗೆ ಮನವಿ ಮಾಡಿದರು. ಆದರೆ, ಕಿಕ್ಕಿರಿದು ಜನ ಸೇರಿದ್ದರಿಂದ ಪೊಲೀಸರು ಏನೂ ಮಾಡಲಾಗಲಿಲ್ಲ. ಹೀಗಾಗಿ ಅವರು ತಡವಾಗಿ ಮದುವೆಗೆ ಹೋಗುವಂತಾಯಿತು.ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ತಡಹೊತ್ತು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.