ADVERTISEMENT

150 ವಿದ್ಯಾರ್ಥಿಗಳ ಪ್ರವೇಶಕ್ಕೆ ಎಂಸಿಐ ಅಸ್ತು

ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜು

​ಪ್ರಜಾವಾಣಿ ವಾರ್ತೆ
Published 28 ಮೇ 2019, 20:00 IST
Last Updated 28 ಮೇ 2019, 20:00 IST
ದತ್ತಾತ್ರೇಯ
ದತ್ತಾತ್ರೇಯ   

ಕೊಪ್ಪಳ: ಕೊಪ್ಪಳ ಸರ್ಕಾರಿವೈದ್ಯಕೀಯ ಕಾಲೇಜಿನ (ಕಿಮ್ಸ್) ಪ್ರಥಮ ವರ್ಷದಎಂಬಿಬಿಎಸ್‌ಗೆ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಅನುಮತಿ ನೀಡಿದೆ.

‘ಈ ವೈದ್ಯಕೀಯ ಕಾಲೇಜು ಸ್ಥಾಪನೆಗೊಂಡು ನಾಲ್ಕು ವರ್ಷವಾಗಿದೆ. ಮೂಲಸೌಕರ್ಯ ಇಲ್ಲ ಎಂಬ ಕಾರಣ ನೀಡಿಪ್ರತಿ ಸಾರಿ ವಿದ್ಯಾರ್ಥಿಗಳ ದಾಖಲಾತಿಗೆ ಎಂಸಿಐ ಅನುಮತಿ ನಿರಾಕರಿಸುತ್ತಿತ್ತು. ಕಳೆದ ಬಾರಿಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿ ಸೀಟು ಭರ್ತಿಗೆ ಅನುಮತಿ ಪಡೆದಿದ್ದೆವು.ಈ ಬಾರಿ ಎಂಸಿಐ ಅನುಮತಿ ದೊರೆಯದೇ ಹೋಗಿದ್ದರೆ ಕಾಲೇಜು ಮುಚ್ಚುವ ಸ್ಥಿತಿ ಇತ್ತು. ಈಗ ಈ ಆತಂಕ ದೂರವಾಗಿದೆ’ ಎಂದು ಕಿಮ್ಸ್ ಪ್ರಭಾರ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ತಿಳಿಸಿದರು.

‘ಎಂಸಿಐ ಸೂಚಿಸಿದ 22ರಲ್ಲಿ 21 ಸೌಲಭ್ಯಗಳನ್ನು ಕಲ್ಪಿಸಿದ್ದೇವೆ.ಗ್ರಂಥಾಲಯ, ಕುಡಿಯುವ ನೀರು, ಅತ್ಯಾಧುನಿಕ ಪ್ರಯೋಗಾಲಯ, ಬೋಧಕ ಸಿಬ್ಬಂದಿ, ಆಸ್ಪತ್ರೆ ಎಲ್ಲ ಸೌಲಭ್ಯಗಳನ್ನು ಗಮನಿಸಿ ಅನುಮತಿ ನೀಡಲಾಗಿದೆ. 150ರಲ್ಲಿಶೇ 85ರಷ್ಟು ಸೀಟುಗಳು ಹೈದರಾಬಾದ್‌ ಕರ್ನಾಟಕ ಪ್ರದೇಶದವಿದ್ಯಾರ್ಥಿಗಳಿಗೆ ದೊರೆಯಲಿವೆ‌’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.