ಮೇಲುಕೋಟೆ: ಈಗ ಬೆಳಿಗ್ಗೆ 7.30ಕ್ಕೆ ಚೆಲುವನಾರಾಯಣಸ್ವಾಮಿ ದರ್ಶನ ಮಾಡಬಹುದಾಗಿದೆ. ಈವರೆಗೆ ಬೆಳಿಗ್ಗೆ 9.30ರ ನಂತರ ದರ್ಶನ ವ್ಯವಸ್ಥೆ ಇತ್ತು.
ಭಕ್ತರ ಮನವಿಗೆ ಸ್ಪಂದಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳಿಗ್ಗೆ 7.30ಕ್ಕೆ ಬಾಗಿಲು ತೆರೆಸುತ್ತಿದ್ದಾರೆ. ಹೊಸ ನಿಯಮ ಜೂನ್ 2ರಿಂದಲೇ ಜಾರಿಗೆ ಬಂದಿದೆ.
ಬೆಳಿಗ್ಗೆ 7.30ಕ್ಕೆ ಪೂಜೆ ಆರಂಭವಾಗುತ್ತದೆ ಎಂದು ಸೂಚನಾ ಫಲಕ ಹಾಕಲಾಗಿತ್ತು. ಆದರೆ ಅರ್ಚಕರು 9.30 ಗಂಟೆ ನಂತರ ಪೂಜೆ ಆರಂಭಿಸುತ್ತಿದ್ದರು. ಕೆಲವು ವೇಳೆ 10 ಗಂಟೆಯೂ ಆಗುತ್ತಿತ್ತು. ಇದಕ್ಕೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಶೀಲನೆ ನಡೆಸಲು ಈಚೆಗೆ ದೇವಾಲಯಕ್ಕೆ ಬಂದಿದ್ದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಅವರೆದುರು ಭಕ್ತರು ಅಸಮಾಧಾನ ವ್ಯಕ್ತಡಿಸಿದ್ದರು.
ಸೂಚನಾ ಫಲಕದಲ್ಲಿನ ವೇಳಾಪಟ್ಟಿಯಂತೆ ಬೆಳಿಗ್ಗೆ 7.30ಕ್ಕೆ ಭಕ್ತರಿಗೆ ದರ್ಶನ ಲಭ್ಯವಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.