ADVERTISEMENT

ಪರಿಷತ್‌ ಚುನಾವಣೆ ಫಲಿತಾಂಶ 2021: ಸೋತ ಪ್ರಮುಖರ ವಿವರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 15:07 IST
Last Updated 14 ಡಿಸೆಂಬರ್ 2021, 15:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ 25 ಕ್ಷೇತ್ರಗಳಿಗೆ ಇದೇ 10 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಮಬಲದ ಫಲಿತಾಂಶ ಪಡೆದಿವೆ.

ನಿರೀಕ್ಷೆ ಮೂಡಿಸಿದ್ದ ಜೆಡಿಎಸ್‌ ಪಕ್ಷ6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಹಾಸನದಲ್ಲಿ2ಸ್ಥಾನ ಪಡೆದರೆ, ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೋಳಿ ಗೆಲುವು ಕಂಡಿದ್ದಾರೆ.

25 ಕ್ಷೇತ್ರಗಳ ಪೈಕಿ ಬಿಜೆಪಿ 11ಸ್ಥಾನಗಳನ್ನು ಹಾಗೂ ಕಾಂಗ್ರೆಸ್‌ ಪಕ್ಷ 11 ಸ್ಥಾನಗಳನ್ನು ಪಡೆದಿವೆ. ದ್ವಿಸದಸ್ಯ ಸ್ಥಾನಗಳಲ್ಲಿ ಕಾಂಗ್ರೆಸ್‌ 5, ಬಿಜೆಪಿ 3, ಜೆಡಿಎಸ್‌ 1, ಪಕ್ಷೇತರ ಅಭ್ಯರ್ಥಿ 1 ಸ್ಥಾನವನ್ನು ಪಡೆದಿದ್ದಾರೆ. ಧಾರವಾಡ, ವಿಜಯಪುರ, ಬೆಳಗಾವಿ. ದಕ್ಷಿಣ ಕನ್ನಡ ಹಾಗೂ ಮೈಸೂರು ದ್ವಿಸದಸ್ಯ ಕ್ಷೇತ್ರಗಳಾಗಿವೆ. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಗೆದಿದ್ದಾರೆ. ಇವರು ಬಿಜೆಪಿಯ ಶಾಸಕ ರಮೇಶ್‌ ಜಾರಕಿಹೋಳಿ ಹಾಗೂ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೋಳಿ ಅವರ ಸಹೋದರ.

ADVERTISEMENT

ಸೋತ ಪ್ರಮುಖರ ವಿವರ...
ಬೆಳಗಾವಿ: ಮಹಂತೇಶ್‌ ಕವಟಿಗಿಮಠ (ಬಿಜೆಪಿ)
ಮಂಡ್ಯ: ಅಪ್ಪಾಜಿ ಗೌಡ (ಜೆಡಿಎಸ್‌)
ಶಿವಮೊಗ್ಗ ಪ್ರಸನ್ನ ಕುಮಾರ್‌ (ಕಾಂಗ್ರೆಸ್‌)
ಬಳ್ಳಾರಿ: ಕೆ.ಸಿ.ಕೊಂಡಯ್ಯ

ಸೋತ ಇತರರು...
ಬೀದರ್‌: ಪ್ರಕಾಶ್‌ ಖಂಡ್ರೆ (ಬಿಜೆಪಿ)
ಕಲಬುರ್ಗಿ: ಶಿವಾನಂದ ಪಾಟೀಲ್‌ (ಕಾಂಗ್ರೆಸ್‌)
ಉತ್ತರ ಕನ್ನಡ: ಭೀಮಣ್ಣ ಟಿ ನಾಯ್ಕ (ಕಾಂಗ್ರೆಸ್‌)
ಚಿತ್ರದುರ್ಗ: ಸೋಮಶೇಖರ ಬಿ (ಕಾಂಗ್ರೆಸ್‌)
ಹಾಸನ : ಎಚ್‌.ಎಂ. ವಿಶ್ವನಾಥ್‌(ಬಿಜೆಪಿ)
ಮೈಸೂರು:ಆರ್‌.ರಘು (ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.