ADVERTISEMENT

ನಟಿ ಸಂಜನಾ ವಿರುದ್ಧ ರವಿ ಶ್ರೀವತ್ಸ ಕಿಡಿ!

pv24-meetoo-join

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 18:41 IST
Last Updated 23 ಅಕ್ಟೋಬರ್ 2018, 18:41 IST
ಟೈಗರ್‌ ಗಲ್ಲಿ
ಟೈಗರ್‌ ಗಲ್ಲಿ   

ಬೆಂಗಳೂರು: ತಮ್ಮ ಮೇಲೆ ನಟಿ ಸಂಜನಾ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಅಲ್ಲಗಳೆದಿರುವ ನಿರ್ದೇಶಕ ರವಿ ಶ್ರೀವತ್ಸ, ‘ಮಿಸ್ಟರ್‌ ಕ್ಲೀನ್‌, ಮಿಸ್ಟರ್‌ ಪರ್ಫೆಕ್ಟ್‌ ಅಂತ ಪ್ರೂವ್‌ ಮಾಡಿ ತೋರಿಸುತ್ತೇನೆ’ ಎಂದು ಸವಾಲು ಒಡ್ಡಿದ್ದಾರೆ.

ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನನ್ನ ಸಿನಿಮಾ ಕುಟುಂಬದ ಸಂಬಂಧಗಳು ಹಾಳಾಗುತ್ತದೆ ಎಂದು ಇದುವರೆಗೆ ಸುಮ್ಮನಾಗಿದ್ದೆ. ಈಗ ಮೌನವನ್ನು ಮುರಿಯದಿದ್ದಲ್ಲಿ ಸುಳ್ಳಿನ ಆರೋಪಗಳಿಗೆ ನಾನೇ ನೀರೆರೆದು ಆಕೆಯನ್ನು ಮತ್ತಷ್ಟು ಬೆಳೆಸಿದಂತಾಗುತ್ತದೆ ಎಂದು ಭಾವಿಸಿ ಪ್ರತಿಕ್ರಿಯಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

‘ಸತ್ಯದ ಗೆಲುವಿಗಾಗಿ ಅಸತ್ಯವನ್ನು ಬೆತ್ತಲೆ ಮಾಡಿ ನಿಲ್ಲಿಸಲೇಬೇಕು. ಇದು ಜಗದ ನಿಯಮ! ಹಾಲುಣಿಸಿದ ತಾಯಿಯನ್ನು ನಡುಬೀದಿಯಲ್ಲಿ ಬೆತ್ತಲೆ ಮಾಡಿ ನಿಲ್ಲಿಸುವ ಮಗ ನಾನಲ್ಲ!! ಇವತ್ತಿಗೂ, ಸಾಯುವ ಕೊನೆಗಳಿಗೆಯಲ್ಲಿ ಕೂಡ ಹೆಮ್ಮೆಯಿಂದ ಹೇಳುತ್ತೇನೆ ‘ಗಂಡ ಹೆಂಡತಿ’ ಚಿತ್ರ ನನಗೆ ಅನ್ನಕೊಟ್ಟ ತಾಯಿ!!!’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.