ಮಂಗಳೂರು: ಲಾಕ್‌ಡೌನ್ ಪರಿಣಾಮ ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ 19 ಕಾರ್ಮಿಕರನ್ನು ಹೊತ್ತುತಂದ ನೌಕೆ ಗುರುವಾರ ಇಲ್ಲಿನ ಬಂದರು ಜೆಟ್ಟಿಗೆ ಬಂದಿಳಿಯಿತು.
ಕಾರ್ಮಿಕರೆಲ್ಲರೂ ಮಂಗಳೂರಿನ ನಿವಾಸಿಗಳಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 19 ಮಂದಿ ವಿವಿಧ ಉದ್ಯೋಗಗಳನ್ನು ಅರಸಿ ಲಕ್ಷದೀಪಕ್ಕೆ ಈ ಹಿಂದೆ ತೆರಳಿದ್ದು, ಲಾಕ್‌ಡೌನ್ ಕಾರಣ ಬಾಕಿಯಾಗಿದ್ದರು. ಅವರನ್ನು ಕರೆತರಲು ಸರ್ಕಾರ ಈ ವಿಶೇಷ ನೌಕೆಯ ವ್ಯವಸ್ಥೆ ಮಾಡಿತ್ತು.
ಜೆಟ್ಟಿಯಿಂದ ಸುಮಾರು 4 ಕಿಮೀ ದೂರದ ಸಮುದ್ರದ ಗಡಿಯಂಚಿಗೆ ಬಂದ ನೌಕೆಯನ್ನು ಪೈಲೆಟ್ ಹುಸೈನಬ್ಬ ಬಂದರಿಗೆ ತಂದರು.
ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ 19 ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದರು.
ಊರು ಸೇರಿದ ಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.