ADVERTISEMENT

ಹುಬ್ಬಳ್ಳಿಯಲ್ಲಿ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 6:11 IST
Last Updated 8 ಜನವರಿ 2019, 6:11 IST
   

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್, ಬಾರ್, ವಾಣಿಜ್ಯ ವಹಿವಾಟು ಅರ್ಧದಷ್ಟು ಬಂದ್ ಆಗಿದೆ. ಸದಾ ವಾಹನ- ಜನ ದಟ್ಟಣೆ ಇರುತ್ತಿದ್ದ ಚನ್ನಮ್ಮ ವೃತ್ತ ಖಾಲಿ ಹೊಡೆಯುತ್ತಿದೆ. ವೃತ್ತದ ಸುತ್ತ ಮುತ್ತ ಬಹುತೇಕ ಅಂಗಡಿಗಲಕು ಬಂದ್ ಆಗಿವೆ.

ವಾಣಿಜ್ಯ ಚಟುವಟಿಕ ನಡೆಯುವ ಕೊಪ್ಪಿಕರ್ ರಸ್ತೆ, ಸ್ಟೇಷನ್ ರಸ್ತೆ, ಲಕ್ಷ್ಮಿ ಮಾಲ್ ರಸ್ತೆಯಲ್ಲಿ ಸಾಕಷ್ಟು ಅಂಗಡಿಗಳುಬಂದ್ ಆಗಿವೆ.

ಸರ್ಕಾರಿ, ಖಾಸಗಿ ಬಸ್ ಸೇವೆ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಧ್ಯೆ ಸಾರಿಗೆ ಸೇವೆ ನೀಡುವಬಿಆರ್ ಟಿಎಸ್ ಸಹ ಬಂದ್ ಇರುವುದರಿಂದ ಜನರು ಪರದಾಡುವಂತಾಗಿದೆ. ದುಬಾರಿ ಹಣ ನೀಡಿ ಆಟೊರಿಕ್ಷಾ ಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಆಟೊಗಳ ಸಂಖ್ಯೆಯೂ ಕಡಿಮೆ ಇದೆ.

ADVERTISEMENT

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.