ADVERTISEMENT

ಬಿಜೆಪಿ ಶಾಸಕ ಹರೀಶ್‌ ಪೂಂಜ ಟ್ವೀಟ್‌ಗೆ ಪರ–ವಿರೋಧದ ಅಭಿಪ್ರಾಯ

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರನ್ನು ಗುಂಡು ಹಾರಿಸಿ ಕೊಲ್ಲಬೇಕು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 1:36 IST
Last Updated 21 ಏಪ್ರಿಲ್ 2020, 1:36 IST
   

ಬೆಳ್ತಂಗಡಿ: ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಮಾಡಿರುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ.

‘ಪಾದರಾಯಪುರದಲ್ಲಿ ನಡೆದ ಘಟನೆಯನ್ನು ನೋಡಿ ಉದ್ವೇಗದಲ್ಲಿ, ನೋವಿನಿಂದ, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಂದರೂ ತಪ್ಪಿಲ್ಲ ಎಂದು ಹೇಳಿದ್ದೆ. ಇಂದು ಉದ್ವೇಗರಹಿತವಾಗಿ, ವಸ್ತುನಿಷ್ಠವಾಗಿ ಯೋಚಿಸಿ ಹೇಳುತ್ತಿದ್ದೇನೆ, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರನ್ನು ಪೊಲೀಸರು ಗುಂಡು ಹಾರಿಸಿ ಕೊಲ್ಲ
ಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ನಿಲ್ಲಲು ಸಾಧ್ಯವೇ ಇಲ್ಲ’ ಎಂದು ಶಾಸಕ ಪೂಂಜ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ವ್ಯಾಪಕ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ADVERTISEMENT

‘ಸ್ವಾಮಿ ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಇದೆ. ನಿಮ್ಮದೇ ಸರ್ಕಾರಕ್ಕೆ ನೀವೇ ರಿಕ್ವೆಸ್ಟ್ ಮಾಡೋದು ನೋಡಿದ್ರೆ ನಗು ಬರ್ತದೆ. ನೀವು ಆಡಳಿತ ಮಾಡುವವರು, ಕೇಳುವವರಲ್ಲ. ನೆನಪಿರಲಿ!’ ಎಂದು ಒಬ್ಬರು ಕಾಲೆಳೆದಿದ್ದಾರೆ.

‘ಶಾಸಕ ಪೂಂಜರಿಗೆ ಗನ್ ಕೊಟ್ಟು ಪಾದರಾಯನಪುರಕ್ಕೆ ಕಳುಹಿಸಿಕೊಡಿ. ಗಲಾಟೆ ಮಾಡಿದವರ ಮೇಲೆ ಗುಂಡು ಹಾರಿಸಿ ಸಂತೋಷ ಪಡಲಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.