ADVERTISEMENT

₹ 250 ದಂಡ; ಗೃಹ ಸಚಿವರಿಗೆ ಪತ್ರ ಬರೆದ ಶಾಸಕ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:39 IST
Last Updated 24 ಡಿಸೆಂಬರ್ 2020, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿನಾಕಾರಣ ನನ್ನನ್ನು ತಡೆದಿದ್ದ ಸಂಚಾರ ಪೊಲೀಸರು, ಮಾಸ್ಕ್‌ ಹಾಕಿದ್ದರೂ ₹ 250 ದಂಡ ವಿಧಿಸಿದ್ದಾರೆ’ ಎಂದು ಆರೋಪಿಸಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಡಿ. 24ರಂದು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರ ಕಡೆಯಿಂದ ಶಾಸಕರ ಭವನಕ್ಕೆ ತೆರಳುತ್ತಿದ್ದೆ. ಶೇಷಾದ್ರಿಪುರ ಠಾಣೆ ಮುಂಭಾಗದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಸಂಚಾರ ದಟ್ಟಣೆಯಿಂದಾಗಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಬಳಿ ಬಂದಿದ್ದ ಪೊಲೀಸರು, ಕಾರಿನ ಟಿಂಟ್ ಗ್ಲಾಸ್‌ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿದ್ದರು’ ಎಂದು ಕುಮಾರಸ್ವಾಮಿ ಪತ್ರದಲ್ಲಿ ಬರೆದಿದ್ದಾರೆ.

‘ಕಾರಿನೊಳಗೆ ಮಾಸ್ಕ್‌ ಹಾಕಿದ್ದರೂ ನನಗೆ ₹ 250 ದಂಡ ವಿಧಿಸಿದ್ದಾರೆ. ಘಟನೆಯಿಂದ ಮುಜುಗರಗೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಪೊಲೀಸರಿಗೆ ಮರು ಮಾತನಾಡದೇ ದಂಡ ಕಟ್ಟಿರುತ್ತೇನೆ. ಹೀಗೆ, ವಿನಾಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.