ADVERTISEMENT

ಮಠಗಳಿಂದ ಸಮಾಜಮುಖಿ ಕೆಲಸ: ಅಮಿತ್ ಶಾ‌‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 10:32 IST
Last Updated 1 ಸೆಪ್ಟೆಂಬರ್ 2018, 10:32 IST
ಮಂತ್ರಾಲಯದಲ್ಲಿ ನವೀಕರಣವಾದ ಸುಜಯೀಂದ್ರ ಆರೋಗ್ಯ ಶಾಲೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದರು. -ಪ್ರಜಾವಾಣಿ ಚಿತ್ರ
ಮಂತ್ರಾಲಯದಲ್ಲಿ ನವೀಕರಣವಾದ ಸುಜಯೀಂದ್ರ ಆರೋಗ್ಯ ಶಾಲೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದರು. -ಪ್ರಜಾವಾಣಿ ಚಿತ್ರ    

ಮಂತ್ರಾಲಯ: 'ಮಠಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸಿಮೀತವಾಗಿಲ್ಲ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿಕೊಂಡು ಬರುತ್ತಿವೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ‌‌ ಹೇಳಿದರು.

ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ನವೀಕರಣ ಮಾಡಿರುವ 'ಸುಜಯೀಂದ್ರ ಆರೋಗ್ಯ ಶಾಲಾ' ಮಿನಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯನ್ನು ಶನಿವಾರಉದ್ಘಾಟಿಸಿ ಮಾತನಾಡಿದರು.

'ನಮ್ಮ ದೇಶದ ಸಂಸ್ಕೃತಿ, ಪರಂಪರೆಯಲ್ಲಿ ಸುಕ್ಷೇತ್ರ ಹಾಗೂ ಮಠ ಮಾನ್ಯಗಳು ಸಮಾಜದ ಜನರೊಂದಿಗೆ ಗುರುತಿಸಿಕೊಂಡಿವೆ. ಶ್ರೀ ರಾಘವೇಂದ್ರ ಸ್ವಾಮೀಜಿ ಸನ್ನಿಧಿ ಇರುವ ಮಂತ್ರಾಲಯದಲ್ಲಿ ಆಸ್ಪತ್ರೆ ಉದ್ಘಾಟನೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ' ಎಂದರು.

ADVERTISEMENT

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, 'ಮಂತ್ರಾಲಯಕ್ಕೆ ಬರುವ ಎಲ್ಲ ಭಕ್ತರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ‌ ಶಸ್ತ್ರ ಚಿಕಿತ್ಸೆ, ಔಷಧಿ ಸೇರಿದಂತೆ ಎಲ್ಲ ರೀತಿಯ ತಪಾಸಣೆಗಳು ಉಚಿತವಾಗಿ ದೊರೆಯಲಿವೆ' ಎಂದು ಹೇಳಿದರು.

ಆಸ್ಪತ್ರೆಯನ್ನು ₹67ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರುಸುದ್ದಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.