ADVERTISEMENT

ಹೊಸಪೇಟೆ | ಸತತ ಏರುತ್ತಿದೆ ತುಂಗಭದ್ರೆ ನೀರಿನ ಮಟ್ಟ 

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 9:10 IST
Last Updated 11 ಜುಲೈ 2020, 9:10 IST
ತುಂಗಭದ್ರಾ ಜಲಾಶಯದ ದೃಶ್ಯ –ಪ್ರಜಾವಾಣಿ ಚಿತ್ರ
ತುಂಗಭದ್ರಾ ಜಲಾಶಯದ ದೃಶ್ಯ –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಮಟ್ಟ ಸತತ ಏರುತ್ತಲೇ ಇದೆ.

ಕಳೆದ 24 ಗಂಟೆಗಳಲ್ಲಿ ಅಣೆಕಟ್ಟೆಗೆ ಎರಡುವರೆ ಅಡಿ ನೀರು ಹರಿದು ಬಂದಿದೆ. ಶುಕ್ರವಾರ ಮೂರು ಅಡಿ ನೀರು ಬಂದಿತ್ತು. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ 1,598.85 ಅಡಿ ನೀರಿನ ಸಂಗ್ರಹವಿದೆ. 34,374 ಕ್ಯುಸೆಕ್‌ ಒಳಹರಿವು ದಾಖಲಾಗಿದೆ.

ಶುಕ್ರವಾರ 26,007 ಕ್ಯುಸೆಕ್‌, ಗುರುವಾರ 16,211 ಕ್ಯುಸೆಕ್‌, ಬುಧವಾರ 7,321 ಕ್ಯುಸೆಕ್‌ ಹಾಗೂ ಮಂಗಳವಾರ 2,532 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಕಾರಣ ಒಳಹರಿವು ಸತತ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ವರೆಗೆ ಇದೇ ರೀತಿ ನೀರು ಹರಿದು ಬರಲಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ತಗ್ಗಿದ ಮಳೆ: ಮೂರ್ನಾಲ್ಕು ದಿನಗಳಿಂದ ಸತತವಾಗಿ ಹೊಸಪೇಟೆ ನಗರ ಹಾಗೂ ಸುತ್ತಮುತ್ತ ಮಳೆಯಾಗುತ್ತಿತ್ತು. ಶನಿವಾರ ಮಳೆ ನಿಂತಿದೆ. ಕಾರ್ಮೋಡಗಳು ಚದುರಿ ಹೋಗಿ ಬಿಸಿಲು ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.