ADVERTISEMENT

ಕುಕನೂರು | ಅನೈತಿಕ ಸಂಬಂಧ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 15:51 IST
Last Updated 27 ಅಕ್ಟೋಬರ್ 2025, 15:51 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕುಕನೂರು: ತಾಲ್ಲೂಕಿನ ಬೆಣಕಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ತವರು ಮನೆ ಬೆಣಕಲ್‌ನಲ್ಲಿಯೇ ವಾಸವಾಗಿದ್ದ ಲಕ್ಷ್ಮೀ ಭಜಂತ್ರಿ (30), ಮೂರು ವರ್ಷದ ಮಗ ರಮೇಶ್ ಹಾಗೂ ಎರಡು ವರ್ಷದ ಮಗಳು ಜಾನವಿ ಅವರಿಗೆ ಮೊದಲು ನೇಣು ಹಾಕಿ ಬಳಿಕ ತಾವೂ ನೇಣು ಹಾಕಿಕೊಂಡಿದ್ದಾರೆ. ಲಕ್ಷ್ಮವ್ವಳನ್ನು ಒಂಬತ್ತು ವರ್ಷಗಳ ಹಿಂದೆ ಕೊಪ್ಪಳ ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದ ಹನುಮಪ್ಪ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಲಕ್ಷ್ಮವ್ವ ತವರುಮನೆಯಲ್ಲಿಯೇ ವಾಸವಿದ್ದಳು.

ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌. ಅರಸಿದ್ಧಿ, ‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ನಡೆದಿದೆ. ಲಕ್ಷ್ಮವ್ವ ಗಂಡ ಹಾಗೂ ತಾಯಿ ಕೆಲಸಕ್ಕೆ ಹೋಗಿದ್ದರು. ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ’ ಎಂದು ತಿಳಿಸಿದರು.

ಘಟನೆ ಕುರಿತು ಮೃತ ಲಕ್ಷ್ಮೀ ತಾಯಿ ಬಸಪ್ಪ ಭಜಂತ್ರಿ ಕುಕನೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು ‘ಬೆಣಕಲ್‌ ಗ್ರಾಮದ ಬೀರಪ್ಪ ಮಠದ ಎಂಬಾತ ಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅನೇಕ ಬಾರಿ ಬುದ್ಧಿವಾದ ಹೇಳಿದ್ದರೂ ಕೇಳಿರಲಿಲ್ಲ. ಮಗಳಿಗೆ ಬೀರಪ್ಪ ಮಾನಸಿಕ ಕಿರುಕುಳ ನೀಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಆರೋಪಿಸಿದ್ದು, ಎಫ್‌ಐಆರ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.