ADVERTISEMENT

Vide: ನಾನು ರಾಮಭಕ್ತ- ರಾಮೋತ್ಸವ ಮಾಡುವೆ: ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌

ಪ್ರಜಾವಾಣಿ ವಿಶೇಷ
Published 4 ಜನವರಿ 2024, 14:55 IST
Last Updated 4 ಜನವರಿ 2024, 14:55 IST

‘ನಾನೂ ಕೂಡ ರಾಮಭಕ್ತನಾಗಿದ್ದು, ರಾಮನನ್ನು ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತೇನೆ. ಇದೇ ಕಾರಣಕ್ಕಾಗಿ, ರಾಮನಗರದಲ್ಲಿ ರಾಮೋತ್ಸವ ನಡೆಸಬೇಕು ಎಂಬ ಚಿಂತನೆ ಮಾಡಿದ್ದೆ. ಅದನ್ನು ಮಾಡೇ ಮಾಡುತ್ತೇನೆ’ ಎಂದು ಕಾಂಗ್ರೆಸ್‌ ಶಾಸಕ ಎಂದರು. ಇಕ್ಬಾಲ್ ಹುಸೇನ್ ಗುರುವಾರ ಚನ್ನಪಟ್ಟಣದಲ್ಲಿ ಹೇಳಿದರು. ‘ರಾಮಮಂದಿರ ವಿಚಾರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಜನರನ್ನು ಒಡೆದಾಳುತ್ತಾ ರಾಜಕೀಯ ಮಾಡುತ್ತಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಾಡುತ್ತಿದ್ದಾರೊ ಏನೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿ ವಿಚಾರ. ಆದರೆ, ನಾವು ಹಾಗೆ ಮಾಡುವುದಿಲ್ಲ. ಕಾಂಗ್ರೆಸ್‌ಗೆ ತನ್ನದೇ ಆದ ಬದ್ಧತೆ ಮತ್ತು ಸಿದ್ದಾಂತವಿದೆ’ ಎಂದು ಹೇಳಿದರು. ಇದರೊಂದಿಗೆ, ದಿನದ ಪ್ರಮುಖ ವಿದ್ಯಮಾನಗಳು ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.