ಮೈಸೂರು: ಕೋವಿಡ್ ಕಾರಣದಿಂದ ಈ ಬಾರಿ ‘ಮೈಸೂರು ಸಾಹಿತ್ಯ ಸಂಭ್ರಮ–2020’ ಆನ್‌ಲೈನ್ (ವರ್ಚುವಲ್ ಸರಣಿ) ವೇದಿಕೆಯಲ್ಲಿ ಆ. 14ರಿಂದ ಸೆ.5ರವರೆಗೆ ವಾರಾಂತ್ಯದಲ್ಲಿ ನಡೆಯಲಿದೆ.
ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್ಸ್–2015 ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.
ನೆದರ್‌ಲ್ಯಾಂಡ್ಸ್‌ಗೆ ಭಾರತದ ರಾಯಭಾರಿ ಆಗಿರುವ ವೇಣು ರಾಜಮಣಿ, ಸೆ. 4ರಂದು ಅಲ್ಲಿಂದಲೇ ಪ‍್ರಧಾನ ಭಾಷಣ ಮಾಡಲಿದ್ದಾರೆ. ಉಸ್ತಾದ್ ಅಮ್ಜದ್ ಅಲಿ ಖಾನ್, ನಂದಿತಾ ದಾಸ್, ಕವಿತಾ ಲಂಕೇಶ್, ವಿಕ್ರಂ ಕಿರ್ಲೋಸ್ಕರ್, ಸಾಗರಿಕಾ ಘೋಷ್, ವಸುಧೇಂದ್ರ, ಅರೂನ್ ರಾಮನ್ ಮತ್ತಿತರ ಲೇಖಕರು ಭಾಗವಹಿಸಲಿದ್ದಾರೆ.
ನೋಂದಣಿಗೆ http://www. mysuruliteraturefestival.com ಗೆ ಭೇಟಿ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.