ADVERTISEMENT

ಕೆಆರ್‌‌ಎಸ್, ಮೈಸೂರು ಅರಮನೆ, ಮೃಗಾಲಯ ಒಂದು ವಾರ ಬಂದ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 11:50 IST
Last Updated 15 ಮಾರ್ಚ್ 2020, 11:50 IST
ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ   
""
""

ಮೈಸೂರು: ಕೊರೊನಾಸೋಂಕಿನಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಮೃಗಾಲಯ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಮಾರ್ಚ್‌ 15 ರಿಂದ ಒಂದು ವಾರ ಸಾರ್ವಜನಿಕರು, ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ(ಕೆಆರ್‌ಎಸ್)ಕ್ಕೆ ಶುಕ್ರವಾರದಿಂದಲೇ ಪ್ರವೇಶ ನಿರ್ಬಂಧಿಸಲಾಗಿದೆ

‘ಮಾರ್ಚ್‌ 22ರವರೆಗೆ ಉದ್ಯಾನಕ್ಕೆ ಪ್ರವೇಶವಿರುವುದಿಲ್ಲ. ಅಲ್ಲದೇ, ಉದ್ಯಾನ ವ್ಯಾಪ್ತಿಯ ಹೋಟೆಲ್‌, ರೆಸಾರ್ಟ್‌ಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ’ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ತಿಳಿಸಿದ್ದಾರೆ.

ಮೈಸೂರು ಮೃಗಾಲಯ

ಶನಿವಾರ ಮೈಸೂರು ನಗರದಲ್ಲಿ ಥಿಯೇಟರ್‌ಗಳು, ಮಾಲ್‌ಗಳು ಮುಚ್ಚಿದ್ದರೆ ಅರಮನೆ ಹಾಗೂ ಮೃಗಾಲಯ ತೆರೆದಿದ್ದವು. ವಿದೇಶಿಗರು ಸೇರಿದಂತೆ ಹಲವು ಪ್ರವಾಸಿಗರು ಭೇಟಿ ನೀಡಿದರು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ 22ರವರೆಗೆ ಅರಮನೆ ಮುಚ್ಚಲು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತೀರ್ಮಾನ ಕೈಗೊಂಡರು. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯ, ರಂಗನತಿಟ್ಟು ಪಕ್ಷಿಧಾಮಕ್ಕೆ ಶುಕ್ರವಾರ ಸಂಜೆಯಿಂದಲೇ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.