ADVERTISEMENT

‘ಮೆಮು ರೈಲು’ ಸಂಚಾರ ಭಾಗಶಃ ರದ್ದು ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 15:51 IST
Last Updated 2 ಮಾರ್ಚ್ 2026, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಮೈಸೂರು: ‘ರಾಮನಗರ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳಲಿದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

‘ಮಾರ್ಚ್ 5ರಂದು ಅಶೋಕಪುರಂನಿಂದ ತೆರಳುವ ಅಶೋಕಪುರಂ–ಬೆಂಗಳೂರು ರೈಲು (ಸಂಖ್ಯೆ 66580) ಚನ್ನಪಟ್ಟಣದವರೆಗೆ ಮಾತ್ರ ಸಂಚರಿಸಲಿದೆ. ಚನ್ನಪಟ್ಟಣದಿಂದ ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರ ರದ್ದುಪಡಿಸಲಾಗಿದೆ. ಮಾರ್ಚ್ 6ರಂದು ಬೆಂಗಳೂರು–ಅಶೋಕಪುರಂ ರೈಲು (ಸಂಖ್ಯೆ 66579) ಕೆಎಸ್‌ಆರ್ ಬೆಂಗಳೂರಿನ ಬದಲಿಗೆ ಚನ್ನಪಟ್ಟಣದಿಂದ ಹೊರಡಲಿದೆ. ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ ಈ ರೈಲು ಸೇವೆ ಲಭ್ಯವಿರುವುದಿಲ್ಲ’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.