ADVERTISEMENT

ಗ್ರಾಮೀಣರು, ಆದಿವಾಸಿಗಳಿಗೆ ದಸರಾ ದರ್ಶನ

ಕೆಎಸ್‌ಆರ್‌ಟಿಸಿ ಬಸ್ಸುಗಳ ವ್ಯವಸ್ಥೆ; ಉಚಿತ ವೀಕ್ಷಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:09 IST
Last Updated 3 ಅಕ್ಟೋಬರ್ 2019, 13:09 IST
ದಸರಾ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಪರಿಮಳಾ ಶ್ಯಾಂ, ಪುಷ್ಪಲತಾ ಜಗನ್ನಾಥ್‌, ಅಭಿರಾಂ ಜಿ.ಶಂಕರ್‌, ಕೋಟೆ ಎಂ.ಶಿವಣ್ಣ, ಆರ್‌.ಅಶೋಕ್‌ ಕುಮಾರ್‌, ಎಂ.ರಾಜೇಂದ್ರ ಇದ್ದಾರೆ
ದಸರಾ ದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಪರಿಮಳಾ ಶ್ಯಾಂ, ಪುಷ್ಪಲತಾ ಜಗನ್ನಾಥ್‌, ಅಭಿರಾಂ ಜಿ.ಶಂಕರ್‌, ಕೋಟೆ ಎಂ.ಶಿವಣ್ಣ, ಆರ್‌.ಅಶೋಕ್‌ ಕುಮಾರ್‌, ಎಂ.ರಾಜೇಂದ್ರ ಇದ್ದಾರೆ   

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಾಡಹಬ್ಬ ಕಣ್ತುಂಬಿಕೊಳ್ಳಲು ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಅವಕಾಶ ಸಿಕ್ಕಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳು 31 ತಾಲ್ಲೂಕುಗಳಿಂದ 11,150 ಮಂದಿಗೆ ದಸರಾ ದರ್ಶನ ಭಾಗ್ಯ ಕಲ್ಪಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು.

ADVERTISEMENT

ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿಗೆ 9 ಬಸ್ಸು ಹಾಗೂ ಇತರ ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ 6 ಬಸ್ಸುಗಳನ್ನು ನಿಯೋಜಿಸಲಾಗಿದೆ. ಅರಮನೆ, ಮೃಗಾಲಯ, ರೈತ ದಸರಾ ಹಾಗೂ ಚಾಮುಂಡಿಬೆಟ್ಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಳಿಗ್ಗೆ 6.30ಕ್ಕೆ ಶುರುವಾಗಿ ಸಂಜೆ 7 ಗಂಟೆಗೆ ಕೊನೆಗೊಳ್ಳಲಿದೆ.

ಕಳೆದ ಬಾರಿ ರಿಯಾಯಿತಿ ದರದ ಬಸ್‌ ಪಾಸ್‌ ಮೊತ್ತವಾಗಿ ₹ 50 ಪಡೆಯಲಾಗುತಿತ್ತು. ಆದರೆ, ಈ ಬಾರಿ ಸಚಿವರ ಸೂಚನೆಯಂತೆ ಉಚಿತ ವ್ಯವಸ್ಥೆ ಮಾಡಲಾಗಿದೆ.

ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಅಭಿರಾಂ ಡಿ.ಶಂಕರ್‌, ದಸರಾ ದರ್ಶನ ಉಪಸಮಿತಿ ಕಾರ್ಯಾಧ್ಯಕ್ಷ ಆರ್‌.ಅಶೋಕ್‌ ಕುಮಾರ್‌ ಇದ್ದರು.

ಅಂಕಿ ಅಂಶ
* 11,150; ಜನರಿಗೆ ದಸರಾ ದರ್ಶನ
* 5; ಜಿಲ್ಲೆಗಳ ಜನರಿಗೆ ಅವಕಾಶ
* 70; ಕೆಎಸ್‌ಆರ್‌ಟಿಸಿ ಬಸ್ಸುಗಳು
* 55; ಜನರು ಪ್ರತಿ ಬಸ್ಸಿನಲ್ಲಿ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.