ADVERTISEMENT

Namma Yatri | ಚೆನ್ನೈನಲ್ಲಿ ಕಾರ್ಯಾಚರಣೆ ಆರಂಭಿಸಿದ ‘ನಮ್ಮ ಯಾತ್ರಿ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2024, 12:50 IST
Last Updated 29 ಜನವರಿ 2024, 12:50 IST
<div class="paragraphs"><p>ನಮ್ಮ ಯಾತ್ರಿ</p></div>

ನಮ್ಮ ಯಾತ್ರಿ

   

ಬೆಂಗಳೂರು: ಬೆಂಗಳೂರು ಮೂಲದ ಆಟೊ ಬುಕ್ಕಿಂಗ್ ಆ್ಯಪ್‌ ‘ನಮ್ಮ ಯಾತ್ರಿ’ ಸೋಮವಾರದಿಂದ ಚೆನ್ನೈ ನಗರದಲ್ಲೂ ತನ್ನ ಸೇವೆ ಆರಂಭಿಸಿದೆ.

ಆ ಮೂಲಕ ಇದೇ ಮೊದಲ ಬಾರಿಗೆ ಕರ್ನಾಟಕದ ಹೊರಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಹಿಂದೆ ತುಮಕೂರು ನಗರದಲ್ಲಿ ನಮ್ಮ ಯಾತ್ರಿ ಸೇವೆ ಶುರುವಾಗಿತ್ತು.

ADVERTISEMENT

ಕಾರ್ಯಾಚರಣೆ ವಿಸ್ತರಿಸುವ ಬಗ್ಗೆ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದೆ.

‘ವಣಕ್ಕಂ ಚೆನ್ನೈ’ ಈಗ ನಿಮ್ಮ ನಗರದಲ್ಲೂ ನಮ್ಮ ಯಾತ್ರಿ ಲಭ್ಯವಿದೆ. ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ನಗರದ ಎದೆ ಬಡಿತದಷ್ಟೇ ವೇಗವಾದ ಪ್ರಯಾಣ ಪಡೆಯಿರಿ’ ಎಂದು ಬರೆದುಕೊಂಡಿದೆ.

‘ಚಾಲಕರ ಸ್ವಂತ ಆ್ಯ‍ಪ್‌’ ಎಂಬ ಧ್ಯೇಯವಾಕ್ಯದೊಂದಿಗೆ 2022ರಲ್ಲಿ ನಮ್ಮ ಯಾತ್ರಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಬೆಂಗಳೂರಿನಲ್ಲಿರುವ ಆಟೋ ಬುಕ್ಕಿಂಗ್‌ ಆ್ಯಪ್‌ಗಳ ‍ಪೈಕಿ ಶೇ 25ರಷ್ಟು ಮಾರುಕಟ್ಟೆ ‍ಪಾಲನ್ನು ‘ನಮ್ಮ ಯಾತ್ರಿ’ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.