ADVERTISEMENT

ಬೋಟ್‌ಗಳಿಗೆ ‘ನೇವಿ ಮೆಸೆಜಿಂಗ್ ರಿಸೀವರ್’

ಚುನಾವಣೆ ಬಳಿಕ ಇಸ್ರೋ ಜತೆ ಚರ್ಚೆ: ವೆಂಕಟರಾವ್ ನಾಡಗೌಡ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:12 IST
Last Updated 10 ಏಪ್ರಿಲ್ 2019, 16:12 IST
ವೆಂಕಟರಾವ್‌ ನಾಡಗೌಡ
ವೆಂಕಟರಾವ್‌ ನಾಡಗೌಡ   

ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರೆಳುವ ಬೋಟ್‌ಗಳಿಗೆ ‘ನೇವಿ ಮೆಸೆಂಜಿಗ್ ರಿಸೀವರ್’ (ಎನ್‌ಎಂಆರ್) ಉಪಕರಣ ಅಳವಡಿಸುವ ಸಂಬಂಧ ಇಸ್ರೋ ನೆರವು ಪಡೆಯಲಾಗುವುದು. ಚುನಾವಣೆ ಬಳಿಕ ಎಲ್ಲ ಬೋಟ್‌ಗಳಿಗೂ ಸಾಧನಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.

ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸುರಕ್ಷತೆ ದೃಷ್ಟಿಯಿಂದ ಬೋಟ್‌ಗಳಿಗೆ ಎನ್‌ಎಂಆರ್ ಅಳವಡಿಸುವಂತೆ ಇಸ್ರೋ ಸಲಹೆ ನೀಡಿದೆ. ಚುಣಾವಣಾ ನೀತಿ ಸಂಹಿತೆ ಕಾರಣ ಮಾತುಕತೆ ನಡೆಸಿಲ್ಲ. ಆದರೆ, ಉಪಕರಣಗಳ ಖರೀದಿಗೆ ಬಜೆಟ್‌ನಲ್ಲಿ ₹ 3 ಕೋಟಿ ಮೀಸಲಿಡಲಾಗಿದೆ’ ಎಂದು ಸಚಿವರು ತಿಳಿಸಿದರು.

ಸಮುದ್ರದಾಳದಲ್ಲಿ ಬೋಟ್‌ಗಳು ಅವಘಡಗಳಿಗೆ ತುತ್ತಾದರೆ ಎನ್‌ಎಂಆರ್ ನೆರವಿನಿಂದ ತುರ್ತು ಸಂದೇಶಗಳನ್ನು ರವಾನಿಸಬಹುದು. ಮೀನುಗಾರರ ಸಂವಹನಕ್ಕೂ ಸಹಕಾರಿಯಾಗಲಿದೆ. ಬೋಟ್ ಮುಳುಗಿದರೆ ನಿಖರವಾದ ಸ್ಥಳದ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ADVERTISEMENT

ನಾಪತ್ತೆಯಾದ ಮೀನುಗಾರರ ಕಾರ್ಯಾಚರಣೆ ಕುರಿತು ಚರ್ಚಿಸಲು ಗೃಹ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸಚಿವರ ಭೇಟಿಗೆ ಅನುಮತಿ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.