ADVERTISEMENT

ಶಿವಮೊಗ್ಗ: ಗುಜರಾತ್‌ನಲ್ಲಿ ನೆಗೆಟಿವ್, ಇಲ್ಲಿ ಪಾಸಿಟಿವ್‌!

​ಪ್ರಜಾವಾಣಿ ವಾರ್ತೆ
Published 10 ಮೇ 2020, 11:23 IST
Last Updated 10 ಮೇ 2020, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಜಿಲ್ಲೆಗೆ ಬಂದ 9 ಜನರನ್ನೂ ಅಹಮದಾಬಾದ್‌ನಲ್ಲಿ ತಪಾಸಣೆ ಮಾಡಲಾಗಿತ್ತು. ಅಲ್ಲಿ 14 ದಿನಗಳ ಕ್ವಾರೆಂಟೈನ್ ಪೂರೈಸಿದ್ದ ಅವರಿಗೆ ಕೊರೊನಾ ಇರುವುದು ದೃಢಪಟ್ಟಿರಲಿಲ್ಲ. ಆದರೆ ಜಿಲ್ಲೆಗೆ ಬಂದ ನಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಅಲ್ಲಿಂದ ಬರಲು ವಾಹನಗಳ ಸೌಕರ್ಯ ಇಲ್ಲದ ಪರಿಣಾಮ ಮತ್ತೆ ಒಂದು ತಿಂಗಳು ಅಲ್ಲೇ ಉಳಿದಿದ್ದರು.ಆ ಅವಧಿಯಲ್ಲಿ ಅವರಿಗೆ ವೈರಸ್‌ ತಗುಲಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲೆಗೆ ಬಂದಾಗ 8 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಶಂಕೆಗೆ ಪುಷ್ಟಿ ನೀಡಿದೆ.

ಇಬ್ಬರಿಗೆ 65, ಒಬ್ಬರಿಗೆ 18 ವರ್ಷ

ADVERTISEMENT

ಕೊರೊನಾ ಸೋಂಕು ಇರುವುದು ದೃಢಪಟ್ಟ 8 ಜನರಲ್ಲಿ ಇಬ್ಬರು 65 ವರ್ಷದವರು. ಒಬ್ಬರಿಗೆ 18 ವರ್ಷ. ಉಳಿದವರು 20, 25, 27, 43, 56 ವರ್ಷದವರು. ಎಲ್ಲರೂ ಪುರುಷರು. ಅವರನ್ನು ಪಿ–808ರಿಂದ ಪಿ–815ರವರೆಗಿನ ಕೋವಿಡ್‌-19 ರೋಗಿಗಳು ಎಂದು ಗುರುತಿಸಲಾಗಿದೆ.

ಜಿಲ್ಲೆಯ 25 ಸಿಬ್ಬಂದಿಗೆ ಕ್ವಾರಂಟೈನ್

ಅಹಮದಾಬಾದ್‌ನಿಂದ ಬಂದ 9 ಜನರನ್ನು ತಪಾಸಣೆ ನಡೆಸಿ ಅವರನ್ನು ಹಾಸ್ಟೆಲ್‌ ಕ್ವಾರೆಂಟೈನ್‌ಗೆ ಬಿಟ್ಟು ಬಂದ ಜಿಲ್ಲೆಯ ಪೊಲೀಸ್‌, ಕಂದಾಯ ಸಿಬ್ಬಂದಿ, ಹಾಸ್ಟೆಲ್‌ ವಾರ್ಡನ್ ಸೇರದಂತೆ 25 ಜನರನ್ನು 14 ದಿನಗಳ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.