ADVERTISEMENT

ಹೊಸ ಜೇಡ ಪ್ರಭೇದಕ್ಕೆ ‘ಅರ್ಕಾವತಿ’ ಹೆಸರು

ನಂದಿಬೆಟ್ಟದ ಬಳಿ ಹೊಸ ಜೇಡ ಪ್ರಭೇದ ಪತ್ತೆ

ನಟರಾಜ ನಾಗಸಂದ್ರ
Published 21 ಡಿಸೆಂಬರ್ 2022, 21:45 IST
Last Updated 21 ಡಿಸೆಂಬರ್ 2022, 21:45 IST
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸಮೀಪದ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಸಮೀಪ ಎಲೆಗಳ ಹಾಗೂ ಮರದ ಕೊಂಬೆಗಳ ಮೇಲೆ ಪತ್ತೆಯಾಗಿರುವ ‘ಅರ್ಕಾವತಿ’ ಜೇಡ
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸಮೀಪದ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಸಮೀಪ ಎಲೆಗಳ ಹಾಗೂ ಮರದ ಕೊಂಬೆಗಳ ಮೇಲೆ ಪತ್ತೆಯಾಗಿರುವ ‘ಅರ್ಕಾವತಿ’ ಜೇಡ   

ದೊಡ್ಡಬಳ್ಳಾಪುರ:ತಾಲ್ಲೂಕಿಗೆ ಸಮೀಪದ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿ ಹೊಸ ಜೇಡ ಪ್ರಭೇದವನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ.ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಹೆಸರನ್ನು ಈ ಹೊಸ ಜೇಡ ಪ್ರಬೇಧಕ್ಕೆ
ಇಡಲಾಗಿದೆ.

ಸಾಲ್ಟಿಸಿಡೆ(salticidae) ಕುಟುಂಬಕ್ಕೆ ಸೇರಿರುವ ಈ ಜೇಡವು ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ. ಅರ್ಧ ಸೆಂಟಿಮೀಟರ್‌ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಹೆಚ್ಚಿನ ಚುರುಕಾಗಿದ್ದು ಎಗರಿ ಕ್ಷಣಾರ್ಧದಲ್ಲಿ ಕಣ್ಮರೆಯಾಗುತ್ತದೆ.

ಹೊಸ ಪ್ರಬೇಧದ ಜೇಡದ ಕುರಿತಂತೆ ರಷ್ಯಾ ಮೂಲದ ಅಂತರರಾಷ್ಟ್ರೀಯ ಜರ್ನಲ್ ‘ಅರ್ಥೋಪೋಡಾ ಸೆಲೆಕ್ಟಾ’ದಲ್ಲಿ ವೈಜ್ಞಾನಿಕ ಬರಹ ಪ್ರಕಟವಾಗಿದೆ.

ADVERTISEMENT

ಈ ಜೇಡದ ಜಾತಿ ಕೂಡ ಅಪರೂಪದ್ದಾಗಿದೆ. ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಂ ಸೇರಿದಂತೆ ಜಗತ್ತಿನ 4 ದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ. ಈಗ ಸಿಕ್ಕಿರುವ ಈ ಜಾತಿಯ ಹೊಸ ಪ್ರಭೇದವು ಇನ್ನೂ ಅಪರೂಪವೆಂದು ನಮ್ಮ ಅಧ್ಯಯನದ ಮೂಲಕ ತಿಳಿಯಲಾಗಿದೆ ಎಂದು ಜೇಡ ಪತ್ತೆ ಹಚ್ಚಿದ ತಂಡದಲ್ಲಿದ್ದ ವೈ.ಟಿ. ಲೋಹಿತ್ ಮಾಹಿ
ತಿ ನೀಡಿದ್ದಾರೆ.

ಜೇಡ ಪತ್ತೆ ಹಚ್ಚುವಲ್ಲಿ ಹಾಗೂ ಅದರ ಜೀವನಕ್ರಮ ಕುರಿತುಚೆನ್ನೈನ ಎಂಟಮಾಲಜಿ ಇನ್‌ಸ್ಟಿಟ್ಯೂಟ್‌ನ ಡಾ.ಜಾನ್‌ ಕೆಲಬ್ ಹಾಗೂ ಮರಿಯಾ ಪ್ಯಾಕಿಯಂ,ತಂಡದ ಸದಸ್ಯ ಡಾ.ಅಭಿಜಿತ್ ಎಪಿಸಿಒಂದು ವರ್ಷ ಅಧ್ಯಯನ, ಸಂಶೋಧನೆ
ನಡೆಸಿದ್ದಾರೆ.

ಚಿನ್ಮಯ್ ಸಿ.ಮಳಿಯೆ, ಎಸ್‌.ಆಶಾ, ಆರ್‌.ಜನಾರ್ದನ, ಜೆ. ಚೇತನ್‌, ಎಸ್.ಪಿ. ಹರಿಚರನ್, ನವೀನ್‌ ಐಯ್ಯರ್, ಕೆ. ಸಾಕ್ಷಿ ಮತ್ತು ಅಕ್ಷಯ್ ದೇಶಪಾಂಡೆ ತಂಡ ಐದು ತಿಂಗಳ ವಾರಾಂತ್ಯಗಳಲ್ಲಿ ಜೇಡ ಹುಡುಕಾಟ ಮತ್ತು ಜೇಡದ ಮಾದರಿ ಸಂಗ್ರಹಣೆಯಲ್ಲಿತೊಡಗಿಸಿಕೊಂಡಿತ್ತು. ಈ ಬಗ್ಗೆ ತಂಡಇನ್ನು ಹೆಚ್ಚಿನ ಸಂಶೋಧನೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಏನೀ ಅರ್ಕಾವತಿ ಜೇಡದ ವೈಶಿಷ್ಟ್ಯ?

ಈ ಜೇಡವನ್ನು ಸಾಮಾನ್ಯವಾಗಿ ಬೆಟ್ಟದ ತಪ್ಪಲಿನ ಎಲ್ಲಾ ಪ್ರದೇಶದಲ್ಲೂ ನೋಡಲು ಸಾಧ್ಯವಾಗಿಲ್ಲ. ಸಂಖ್ಯೆಯೂ ವಿರಳವಾಗಿರುವುದು ಕಂಡುಬಂದಿದೆ.

ತರಗೆಲೆ ಉದುರಿದ ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡ ಕಂಡುಬಂದಿದೆ.ಆದರೆ, ಗಿಡ, ಮರಗಳ ಮೇಲೆ ಕಾಣಿಸಿಲ್ಲ. ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿ ಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ.

ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ. ಸುರಳಿ ಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ. ಗಂಡು, ಹೆಣ್ಣು ಮತ್ತು ಮರಿ ಜೇಡಗಳನ್ನು ತಂಡ ನೋಡಿದೆ.

ರಾಜ್ಯದಲ್ಲಿ 500 ಜೇಡ ಪ್ರಭೇದ

ಇದು ಜಗತ್ತಿನಲ್ಲಿ ಗುರುತಿಸಲಾಗಿರುವ ಸುಮಾರು 50,000 ಜೇಡ ಪ್ರಭೇದಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಭಾರತದಲ್ಲಿ ಸುಮಾರು 2,000 ಜೇಡ ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 500 ಜೇಡದ ಪ್ರಭೇದಗಳಿವೆ.

ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸಮೀಪದ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಸಮೀಪ ಎಲೆಗಳ ಹಾಗೂ ಮರದ ಕೊಂಬೆಗಳ ಮೇಲೆ ಪತ್ತೆಯಾಗಿರುವ ‘ಅರ್ಕಾವತಿ’ ಜೇಡ
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸಮೀಪದ ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿ ಸಮೀಪ ಎಲೆಗಳ ಹಾಗೂ ಮರದ ಕೊಂಬೆಗಳ ಮೇಲೆ ಪತ್ತೆಯಾಗಿರುವ ‘ಅರ್ಕಾವತಿ’ ಜೇಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.