ADVERTISEMENT

ಕೊಡಗಿನ ವಿವಿಧೆಡೆ ಹದ ಮಳೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 17:07 IST
Last Updated 6 ಫೆಬ್ರುವರಿ 2019, 17:07 IST

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಹದ ಮಳೆ ಸುರಿಯಿತು.

ನಾಪೋಕ್ಲು, ಹೊದ್ದೂರು, ಕಕ್ಕಬ್ಬೆ, ಕೋಕೇರಿ ಭಾಗದಲ್ಲಿ ಜೋರು ಮಳೆ ಸುರಿದರೆ, ಮಡಿಕೇರಿ, ಚೇರಂಬಾಣೆ, ಯರವನಾಡು, ಉಡೋತ್‌ ಮೊಟ್ಟೆ, ಬೆಟ್ಟಗೇರಿ, ಭಾಗಮಂಡಲ, ಮೇಕೇರಿ ವ್ಯಾಪ್ತಿಯಲ್ಲಿ 10 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.

ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಮುಗಿದಿದೆ. ಈಗ ಮಳೆ ಸುರಿದರೆ ಕಾಫಿ ಗಿಡದಲ್ಲಿ ಹೂವು ಅರಳಿ ಮುಂದಿನ ವರ್ಷದ ಫಸಲಿಗೆ ತೊಂದರೆಯಾಗಲಿದೆ. ಮಾರ್ಚ್ ಅಂತ್ಯದಲ್ಲಿ ಜೋರು ಮಳೆ ಸುರಿದರೆ ಕಾಫಿ ಬೆಳೆಗೆ ಅನುಕೂಲ ಎಂದು ರೈತರು ಹೇಳುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.