ರಾಮನಗರ: ಪೂರ್ವ ನಿಗದಿಯಂತೆ ಇದೇ 17ರಂದು ಮನೆಯ ಆವರಣದಲ್ಲೇ ನಿಖಿಲ್-ರೇವತಿ ವಿವಾಹ ನೆರವೇರಿಸಲಾಗುವುದು ಎಂದು ಜೆಡಿಎಸ್ ಶಾಸಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ನಡುವೆ ಮದುವೆ ಮಾಡಲು ಆಗದು. ಎರಡೂ ಕುಟುಂಬ ಸದಸ್ಯರು ಮಾತ್ರ ಸೇರಿ ಅಂದೇ ಮದುವೆ ಶಾಸ್ತ್ರ ಮುಗಿಸುತ್ತೇವೆ. ಮುಂದೆ ಅವಕಾಶ ಸಿಕ್ಕರೆ ರಾಮನಗರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.