ADVERTISEMENT

ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳಿಲ್ಲ: ರಘುಪತಿ ಭಟ್

‘ಸುವರ್ಣ ತ್ರಿಭುಜ’ ದೋಣಿಯ ಶೋಧ ಕಾರ್ಯಾಚರಣೆ ವೀಕ್ಷಿಸಿದ ಉಡುಪಿ ಶಾಸಕರಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಮೇ 2019, 6:06 IST
Last Updated 3 ಮೇ 2019, 6:06 IST
ಸಮುದ್ರದಲ್ಲಿ ಮುಳಗಿದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ದೋಣಿ
ಸಮುದ್ರದಲ್ಲಿ ಮುಳಗಿದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ದೋಣಿ   

ಕಾರವಾರ:‘ಸಮುದ್ರದಲ್ಲಿ ಮುಳುಗಿರುವ ಮೀನುಗಾರಿಕಾ ದೋಣಿ ಸುವರ್ಣ ತ್ರಿಭುಜದಲ್ಲಿದ್ದ ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳೂ ಅಲ್ಲಿಲ್ಲ. ದೋಣಿಯಲ್ಲಿದ್ದ ಏಳೂ ಮೀನುಗಾರರ ಕುಟುಂಬಗಳಿಗೆ ದೊಡ್ಡರೀತಿಯ ಪರಿಹಾರ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡಲಿದ್ದೇವೆ’ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ನಾಪತ್ತೆಯಾದ ದೋಣಿಯ ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅವರು, ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಶುಕ್ರವಾರ ಬೆಳಿಗ್ಗೆ ವಾಪಸಾಗಿ ಸುದ್ದಿಗಾರರ ಜತೆ ಮಾತನಾಡಿದರು.

‘ಸುವರ್ಣ ತ್ರಿಭುಜ ದೋಣಿಯ ಅವಶೇಷಗಳು ಬುಧವಾರ ಪತ್ತೆಯಾಗಿವೆ. ಕಾರ್ಯಾಚರಣೆಯನ್ನು ವೀಕ್ಷಿಸಲುನನ್ನನ್ನುಹಾಗೂ ಮೀನುಗಾರರ ಒಂಬತ್ತು ಮಂದಿ ಮುಖಂಡರನ್ನುನೌಕಾಪಡೆಯ ಅಧಿಕಾರಿಗಳು ಭಾನುವಾರ ರಾತ್ರಿ ಕರೆದುಕೊಂಡು ಹೋಗಿದ್ದರು.ಸುಮಾರು ಐದು ದಿನ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ನೌಕಾಪಡೆಯನುರಿತ ಕ್ಯಾಪ್ಟನ್‌ಗಳ ಸಮ್ಮುಖದಲ್ಲಿ,ಶಬ್ದದ ಕಂಪನ ಆಧರಿಸಿದ ಸೋನಾರ್ ತಂತ್ರಜ್ಞಾನಬಳಸಿ ಶೋಧ ಕಾರ್ಯ ನಡೆಸಲಾಯಿತು’ ಎಂದರು.

ADVERTISEMENT

‘ಇಡೀ ಕಾರ್ಯಾಚರಣೆಯವಿಡಿಯೊಚಿತ್ರೀಕರಣ ಮಾಡಲಾಗಿದೆ. ದೋಣಿಯ ಅವಶೇಷಗಳನ್ನು ನಾವು ಸ್ವತಃ ನೋಡಿದ್ದೇವೆ. ಅವು ಕಂಡಲ್ಲೇನಾವಿದ್ದ ದೋಣಿಯನ್ನು ನಿಲ್ಲಿಸಿ ನೌಕಾಪಡೆಯ ಮುಳುಗು ತಜ್ಞರನ್ನು ಕೆಳಗಿಳಿಸಲಾಯಿತು.ಮೀನುಗಾರರ ಸಮ್ಮುಖದಲ್ಲೇ ಹುಡುಕಾಟ ಮಾಡಿದ್ದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ನಾಗರಿಕರಿಗೆ ಇದೇ ಮೊದಲ ಬಾರಿಗೆ ನೌಕಾನೆಲೆಯ ದೋಣಿಯಲ್ಲಿ ಹೋಗುವ ಅವಕಾಶ ನೀಡಿದ್ದರಿಂದ ಸುವರ್ಣ ತ್ರಿಭುಜ ದೋಣಿ ಪತ್ತೆಯಾಯಿತು.ಇದಕ್ಕೆ ನೌಕಾನೆಲೆಯ ಎಲ್ಲ ಅಧಿಕಾರಿಗಳಿಗೆ, ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಸಲ್ಲಬೇಕು’ ಎಂದು ಹೇಳಿದರು.

ಉಡುಪಿ ಜಿಲ್ಲೆ ಮಲ್ಪೆ ಬಂದರಿನಿಂದ ಡಿ.15ರಂದು ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದ ದೋಣಿಯಲ್ಲಿ ಉತ್ತರ ಕನ್ನಡದ ಐವರು ಹಾಗೂ ಉಡುಪಿಯ ಇಬ್ಬರು ಮೀನುಗಾರರಿದ್ದರು.ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪದಿಂದ ದೋಣಿಯು ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು. ಪೊಲೀಸ್‌, ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆಯಿಂದ ಸಾಕಷ್ಟು ಶೋಧನೆ ನಡೆದರೂ ಪತ್ತೆಯಾಗಿರಲಿಲ್ಲ. ಇದು ಅದರಲ್ಲಿದ್ದವರ ಕುಟುಂಬದ ಸದಸ್ಯರು ಮತ್ತು ಇತರ ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.