ADVERTISEMENT

ಕ್ವಾರೆಂಟೈನ್ ಕೇಂದ್ರದಲ್ಲೇ ಪಾಲನೆಯಾಗುತ್ತಿಲ್ಲ ದೈಹಿಕ ಅಂತರ!

​ಪ್ರಜಾವಾಣಿ ವಾರ್ತೆ
Published 7 ಮೇ 2020, 1:21 IST
Last Updated 7 ಮೇ 2020, 1:21 IST
ಕ್ವಾರಂಟೈನ್‌ಗೆ ಒಳಗಾಗಿರುವವರು ಆಹಾರಕ್ಕಾಗಿ ಗುಂಪುಗಟ್ಟಿರುವುದು
ಕ್ವಾರಂಟೈನ್‌ಗೆ ಒಳಗಾಗಿರುವವರು ಆಹಾರಕ್ಕಾಗಿ ಗುಂಪುಗಟ್ಟಿರುವುದು    

ಬಾಗಲಕೋಟೆ: ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ವಸತಿ ನಿಲಯದಲ್ಲಿ ಕ್ವಾರೆಂಟೈನ್ ಗೆ ಒಳಗಾಗಿರುವ ಗ್ರಾಮಸ್ಥರು ಊಟಕ್ಕಾಗಿ ಮುಗಿಬಿದ್ದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಢಾಣಕಶಿರೂರು ಗ್ತಾಮದಲ್ಲಿ 21 ವರ್ಷದ ಗರ್ಭಿಣಿ, 10 ವರ್ಷದ ಬಾಲಕ ಸೇರಿದಂತೆ 13 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಅದರ ಬೆನ್ನಲ್ಲೇ ಸೋಂಕಿತರ ಸಂಪರ್ಕಕ್ಕೆ ಬಂದ 80ಕ್ಕೂ ಹೆಚ್ಚು ಜನರನ್ನು ಚಿಕ್ಕಮುಚ್ಚಳಗುಡ್ಡದಲ್ಲಿ ಇರಿಸಲಾಗಿದೆ.

ಅಲ್ಲಿ ಸುರಕ್ಷಿತ ಅಂತರ ಪಾಲನೆ ಮಾಡದೇ ಗ್ರಾಮಸ್ಥರು ಊಟ ಪಡೆಯಲು ಮುಗಿಬಿದ್ದಿರುವುದನ್ನು ವಿಡಿಯೊ ಚಿತ್ರೀಕರಿಸಿ ಹರಿಯ ಬಿಡಲಾಗಿದೆ. ಅವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.