ADVERTISEMENT

ಮೈಸೂರಿನಲ್ಲಿ ‘ಸೀಲ್‌ಡೌನ್‌’ನ ಯಾವುದೇ ಲಕ್ಷಣ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 8:56 IST
Last Updated 10 ಏಪ್ರಿಲ್ 2020, 8:56 IST
   

ಮೈಸೂರು: ನಗರದಲ್ಲಿ ‘ಸೀಲ್‌ಡೌನ್‌’ನ ಯಾವುದೇ ಲಕ್ಷಣಗಳೂ ಶುಕ್ರವಾರ ಗೋಚರಿಸಿಲ್ಲ. ಜಿಲ್ಲಾಡಳಿತ ಸಹ ಅಧಿಕೃತವಾಗಿ ಈ ಕುರಿತು ಪ್ರಕಟಿಸಿಲ್ಲ.

ಎಂದಿನಂತೆ ದಿನಸಿ, ಹಾಲು, ತರಕಾರಿ, ಹಣ್ಣು, ಔಷಧ ವ್ಯಾಪಾರ ನಡೆದಿದೆ. ಸಂತೆಪೇಟೆ, ದೇವರಾಜಮಾರುಕಟ್ಟೆ, ಶಿವರಾಮಪೇಟೆ ಸೇರಿದಂತೆ ಬಹುತೇಕ ಕಡೆ ಜನರು ಖರೀದಿಯಲ್ಲಿ ತೊಡಗಿದ್ದ ದೃಶ್ಯ ಶುಕ್ರವಾರ ಮಧ್ಯಾಹ್ನ ಕಂಡು ಬಂತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ದೇಶವನ್ನು ಕುರಿತು ಭಾಷಣ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದ್ದು, ಸೀಲ್‌ಡೌನ್‌ ಆಗುವ ಸಾಧ್ಯತೆ ಇದೆ ಎಂದು ಹೆಚ್ಚಿನ ಜನರು ಖರೀದಿಯಲ್ಲಿ ತೊಡಗಿದ್ದಾರೆ.

ADVERTISEMENT

ದಿನಸಿ ಅಂಗಡಿಗಳ ಮುಂದೆ ಉದ್ದನೆಯ ಸಾಲುಗಳು ಕಂಡು ಬಂದವು. ಪೊಲೀಸರು ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು ಎಂದು ಮೈಕ್ ಮೂಲಕ ಸೂಚನೆಗಳನ್ನು ಕೊಡುತ್ತಿದ್ದರು. ಇಷ್ಟರ ಮಧ್ಯೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಹಿವಾಟುಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.