ADVERTISEMENT

ಕೊಪ್ಪಳ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 14:13 IST
Last Updated 9 ಜನವರಿ 2019, 14:13 IST
ಕೊಪ್ಪಳದಲ್ಲಿ ಬುಧವಾರ ಸಾರಿಗೆ ಸಂಸ್ಥೆ ಬಸ್‌ಗಳು, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು
ಕೊಪ್ಪಳದಲ್ಲಿ ಬುಧವಾರ ಸಾರಿಗೆ ಸಂಸ್ಥೆ ಬಸ್‌ಗಳು, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು   

ಕೊಪ್ಪಳ: ಮೋಟಾರು ವಾಹನ ತಿದ್ದುಪಡಿ ಮಸೂದೆ ಹಿಂಪಡೆಯಬೇಕು ಹಾಗೂ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಎರಡನೇ ದಿನವಾದ ಬುಧವಾರ ನೀರಸ ಪ್ರತಿಕ್ರಿಯೆ ದೊರೆಯಿತು.

ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ಸಂಚಾರಿಸದವು. ಆದರೆ, ಬಸ್‌ ನಿಲ್ದಾಣದಲ್ಲಿ ಅಷ್ಟೊಂದು ಬಸ್‌ಗಳು ಕಾಣಿಸಲಿಲ್ಲ. ಎರಡು ದಿನದ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಕೇಂದ್ರೀಯ ಬಸ್‌ ನಿಲ್ದಾಣದ ಬಳಿ ಜನದಟ್ಟಣೆ ಕಂಡು ಬರಲಿಲ್ಲ.

ಮುನ್ನೆಚ್ಚರಿಕೆ ದೃಷ್ಟಿಯಿಂದ ಕೇಂದ್ರೀಯ ಬಸ್‌ ನಿಲ್ದಾಣದ ಬಳಿ ಎರಡು ಪೊಲೀಸ್‌ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳು ಎಂದಿನಂತೆ ಆರಂಭವಾಗಿದ್ದು, ಹೊಟೇಲ್‌, ಕಿರಾಣಿ, ಮೊಬೈಲ್‌, ಫ್ಯಾನ್ಸಿ ಸ್ಟೋರ್‌ಗಳು ಸೇರಿದಂತೆ ಇತರ ಅಂಗಡಿಗಳು ಆರಂಭವಾಗಿದ್ದು, ಭಾರತೀಯ ಜೀವ ವಿಮೆ ಕಚೇರಿ ಮುಚ್ಚಿತ್ತು, ಆದರೆ, ಖಾಸಗಿ ಹಾಗೂ ರಾಷ್ಟ್ಟೀಕೃತ ಬ್ಯಾಂಕ್‌ ಆರಂಭವಾಗಿದ್ದವು.

ADVERTISEMENT

ಪೆಟ್ರೋಲ್‌ ಪಂಪ್‌ಗಳಲ್ಲಿಯೂ ಸಹ ಸಹಜವಾದ ಸ್ಥಿತಿ ಇತ್ತು. ನಗರದ ಚಿತ್ರಮಂದಿರಗಳು ಸಹಿತ ಮುಂಜಾನೆಯ ಪ್ರದರ್ಶನದಿಂದಲೇ ಆರಂಭವಾಗಿದ್ದವು. ಖಾಸಗಿ ವಾಹನಗಳ ಸಂಚಾರ ಕೊಂಚ ಹೆಚ್ಚಾಗಿ ಕಂಡು ಬಂದಿತು. ದೂರದ ಬಂದ್‌ ನಿಮಿತ್ತ ದೂರದ ಊರುಗಳಿಗೆ ಬಂದ್‌ ಸಂಚಾರ ಕಲ್ಫಿಸಿರಲಿಲ್ಲ. ಹೀಗಾಗಿ ಪ್ರಯಾಣಿಕರು ಕೆಲ ಸಮಯ ಪರದಾಡುವಂತಾಯಿತು. ಇದರಿಂದ ಸಾರಿಗೆ ಸಿಬ್ಬಂದಿಗಳಲ್ಲಿ ಗೊಂದಲ ಇತ್ತು.

ಬುಧವಾರ ಶಾಲೆಗಳು ಎಂದಿನಂತೆ ಕಾರ್ಯಾರಂಭಿಸಿದ್ದು, ಬುಧವಾರ ಮಾಮೂಲಿಯಂತೆ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.