ADVERTISEMENT

ಎಂದಿನಂತೆ ಮುಂದುವರಿಯಲಿದೆ ಓಲಾ‌ ಕಂಪನಿ ಸೇವೆ

ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಪ್ರವೇಶ * ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:14 IST
Last Updated 24 ಮಾರ್ಚ್ 2019, 19:14 IST
   

ಬೆಂಗಳೂರು:ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಓಲಾ ಕಂಪನಿ ಪರವಾನಗಿ ಅಮಾನತು ಆದೇಶ ಹಿಂಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

'ಇಂದಿನಿಂದ ಎಂದಿನಂತೆ ಓಲಾ‌ ಕಂಪನಿ ಕ್ಯಾಬ್‌ಗಳು ಓಡಾಡಲಿವೆ. ಆದಾಗ್ಯೂ,ನೀತಿಗಳನ್ನುಹೊಸ ತಂತ್ರಜ್ಞಾನದೊಂದಿಗೆ ತುರ್ತಾಗಿ ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಜೊತೆಗೆ ಸರ್ಕಾರಗಳು ಹೊಸ ನೀತಿಗಳನ್ನು ಜಾರಿಗೊಳಿಸಲುಕೈಗಾರಿಕೆಗಳೂ ಸರ್ಕಾರದೊಟ್ಟಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಹೀಗಾಗಿ ಓಲಾ ಕಂಪನಿ ಕ್ಯಾಬ್‌ ಹಾಗೂ ಆಟೋಗಳು ಎಂದಿನಂತೆ ಓಡಾಟ ನಡೆಸಲಿವೆ.

ADVERTISEMENT

ಸಾರಿಗೆ ಇಲಾಖೆಯುಕಂಪೆನಿ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಿದ್ದರಿಂದ ನಗರದಲ್ಲಿ ಓಲಾ ಕ್ಯಾಬ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜೊತೆಗೆ ಪ್ರತಿಸ್ಪರ್ಧಿ ಕಂಪನಿಗಳ ಕ್ಯಾಬ್‌ ಬಳಕೆ ಹೆಚ್ಚಳವಾಗಿತ್ತು.

ಮುಖ್ಯ ಕಾರ್ಯದರ್ಶಿಗೆ ಓಲಾ ಕಂಪನಿ ಪರವಾನಗಿ ವಿಚಾರ ಗಮನಿಸುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.