ADVERTISEMENT

ಒಳನೋಟ| ವ್ಯವಹಾರ ಮೇಲೆತ್ತಿದ ಸಹಕಾರ: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 13:18 IST
Last Updated 18 ಸೆಪ್ಟೆಂಬರ್ 2022, 13:18 IST
   

‘ವ್ಯವಹಾರ ಮೇಲೆತ್ತಿದ ಸಹಕಾರ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಸೆಪ್ಟೆಂಬರ್ 18) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ರಾಜ್ಯದಾದ್ಯಂತ ಸೂಪರ್ ಮಾರ್ಕೆಟ್‌ ತೆರೆಯಿರಿ’

ತಾನು ಎಲ್ಲಿರಿಗಾಗಿ, ಎಲ್ಲರೂ ತನಗಾಗಿ ಎನ್ನುವುದೆ ಸಹಕಾರ ತತ್ವದ ಮೂಲ ಮಂತ್ರ. ಒಬ್ಬರಿಗಷ್ಟೇ ಲಾಭವಾಗುವ ಬೃಹತ್ ಕಂಪನಿಗಳ ಅಬ್ಬರ ತಗ್ಗಿಸಿ, ರಾಷ್ಟ್ರೀಯ ಆದಾಯ ಹೆಚ್ಚಾಗುವ ಇಂತಹ ಅಂಗಡಿಗಳ ಬೆಳವಣಿಗೆಗೆ ಸರ್ಕಾರ ಯೋಜನೆ ರೂಪಿಸಬೇಕು. ರಾಜ್ಯದ ಎಲ್ಲಾ ಭಾಗಗಳಲ್ಲಿ ಸಹಕಾರ ತತ್ವದ ಸೂಪರ್‌ ಮಾರ್ಕೆಟ್‌ಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು.

ADVERTISEMENT

ಚನ್ನಬಸವ ಶಾಸ್ತ್ರಿ, ಚಳ್ಳಕೆರೆ

***

‘ಹಳ್ಳಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆ’

ಸರ್ಕಾರ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಇಂತಹ ಸೂಪರ್ ಮಾರ್ಕೆಟ್‌ಗಳನ್ನು ಆರಂಭಿಸಲು ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ದಿನನಿತ್ಯ ಬಳಸುವ ಪದಾರ್ಥಗಳನ್ನು ಸಿಗುವ ವ್ಯವಸ್ಥೆ ಮಾಡಬೇಕು. ಇದರಿಂದ ಹಳ್ಳಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸುವುದು ಒಳಿತು.

ಅಹ್ಮದ್ ಪಠಾಣ. ಮಿಶ್ರೀಕೋಟಿ.

***

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.